ರಾಜ್ಯದಲ್ಲಿ, ಬಿಜೆಪಿಯವರ ಮನೆಯಲ್ಲಿ ಏನೇ‌ ಆದ್ರೂ ನಾನು ಕಾರಣಾನಾ:ಡಿಕೆಶಿ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಏನೇ ಆದ್ರೂನು ನಾನೇ ಕಾರಣನಾ, ಬಿಜೆಪಿಯವರ ಮನೆಯಲ್ಲಿ,ಪಕ್ಷದಲ್ಲಿ ಅಷ್ಟೇ ಯಾಕೆ, ಅವರ ಹೊಟ್ಟೆ ಒಳಗೆ ಏನಾದ್ರೂ ನಾನೇ ಕಾರಣನಾ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ವ್ಯಂಗ್ಯ ವಾಗಿ ಪ್ರಶ್ನಿಸಿದರು.

ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರಿಗೆ ಕೋರ್ಟ್‌ ಜಾಮೀನು ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಬೇಲ್ ವಿಚಾರ ಕೋರ್ಟ್‌ಗೆ ಸಂಬಂಧಿಸಿದ್ದು, ಕಾನೂನು ಉಂಟು, ಕೋರ್ಟ್ ಉಂಟು, ಅವರು ಉಂಟು ಎಲ್ಲದಕ್ಕೂ ನನ್ನನ್ನ ಕೇಳಿದರೆ ನಾನೇನು ಹೇಳಲಿ ಎಂದು ‌ಪ್ರಶ್ನಿಸಿದರು.

ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣ, ನನ್ನ ನೆನಸಿಕೊಂಡಿಲ್ಲ ಅಂದ್ರೆ ಬಿಜೆಪಿ ಅವರಿಗೆ ನಿದ್ದೆ ಬರಲ್ಲ ಎಂದು ಟೀಕಿಸಿದರು.

ಕಾನೂನಿಗೆ, ಕೋರ್ಟ್‌ಗೆ ನಾವು ಏನು ಗೌರವ ಕೊಡಬೇಕೊ ಕೊಡುತ್ತೇವೆ. ಕೋರ್ಟ್ ಏನು ಬೇಕೋ ನಿರ್ಧಾರ ತೆಗೆದುಕೊಳ್ಳುತ್ತೆ. ಮೊದಲು ಅವರು ಮಾತನಾಡಿದ್ದು ಸರೀನಾ ಅಂತ ಕೇಳಿ ಎಂದು ಮಾಧ್ಯಮದವರಿಗೆ ಹೇಳಿದರು.

ಅವರ ಭಾಷೆ, ಸಂಸ್ಕ್ರತಿಯಿಂದ ಹರುಕು ಬಾಯಿ ಅನ್ನೋದು ಗೊತ್ತಾಗಿದೆ. ಈ ಹಿಂದೆ ಜಯಮಾಲಾಗೂ ಮಾತಾಡಿದ್ರು, ಸಿಎಂ ಬಗ್ಗೆನೂ ಮಾತನಾಡಿದ್ರು, ನಿತ್ಯ ಸುಮಂಗಲಿ ಅಂತ ಹೇಳಿದ್ರು, ಇದು ಸರಿನಾ, ತಪ್ಪಾ ನೀವು ಹೇಳಿ ಎಂದು ಪ್ರಶ್ನಿಸಿದರು.

ಸಿ.ಟಿ ರವಿ ಮೇಲೆ ನನಗೂ ಸಿಂಪತಿ ಇತ್ತು. ಚಿಕ್ಕಮಗಳೂರು ಜನ ಅಂದರೆ ಸಂಸ್ಕೃತಿಯುಳ್ಳ ಜನ. ಆದ್ರೆ ಆ ಪಾರ್ಟಿಯಲ್ಲಿ ಇರೋರು ಹೆಣ್ಣು ಮಕ್ಕಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಆತ್ಮ ಸಾಕ್ಷಿ ಇದ್ರಲ್ಲಿ ಮುಖ್ಯ ಆಗುತ್ತೆ. ಪಕ್ಷದ ಸುಮ್ಮನೆ ಸಪೋರ್ಟ್ ಮಾಡೋದಲ್ಲ, ಅದನ್ನ ಖಂಡಿಸಬೇಕಲ್ವಾ, ಸರಿ ಇಲ್ಲ ಅಂತ ಹೇಳಬೇಕಲ್ವಾ, ನನ್ನ ಪಕ್ಷದಲ್ಲಿ ಯಾರು ಹಾಗೇ ಮಾತಾಡಿದ್ರೆ ಖಂಡಿಸ್ತಿದ್ದೆ ಎಂದು ಡಿಕೆಶಿ ಹೇಳಿದರು.