ಮೈಸೂರು ಪುರಭವನಕ್ಕೆ ಬಂದ ರಾಷ್ಟ್ರಪತಿಗಳು!

ಮೈಸೂರು: ನಗರದ ಪುರಭವನಕ್ಕೆ ರಾಷ್ಟ್ರಪತಿ, ಸಚಿವರು ಪೊಲೀಸ್ ಭಾಜಾ ಬಜಂತ್ರಿ ಜತೆ ಬಂದದ್ದು ಕಂಡು ಜನ ಒಮ್ಮೆಗೆ ದಂಗಾದರು.

ಇದು ನಿಜ ಆದರೆ ಬಂದದ್ದು ರಷ್ಟ್ರಪತಿ ಹಾಗೂ ಸಚಿವರೇ ಆದರೂ ಅವರೆಲ್ಲ ಅಸಲಿಯಲ್ಲ.

ಪೊಲೀಸ್ ಗಸ್ತಿನೊಂದಿಗೆ, ಬ್ಯಾಂಡ್‌ಸೆಟ್ ಮೆರವಣಿಗೆ ಮೂಲಕ ರಾಷ್ಟ್ರಪತಿ, ಸಚಿವರು ಮತ್ತು ಶಾಸಕರರು ಪುರಭವನ ಪ್ರವೇಶಿಸಿದ್ದನ್ನು ಕಂಡು ಸಾರ್ವಜನಿಕರು ಕೂಡಾ ಕುತೂಹಲದಿಂದ ಧಾವಿಸಿದರು.

ಇದೆಲ್ಲ ಆದದ್ದು ಭಾನುವಾರ ಸಂಜೆ. ಪುರಭವನದಲ್ಲಿ ಮೈಸೂರು ತಾಲ್ಲೂಕು ವರುಣಾ ಹೋಬಳಿ ಹಡಜನ, ಚೋರನಹಳ್ಳಿ ಮತ್ತಿತರ ಗ್ರಾಮದ ಯುವಕರು ಅಭಿನಯಿಸಿದ ರತ್ನ ಮಾಂಗಲ್ಯ ಅಥವಾ ಮರಳಿ ಬಂದ ಮಾಂಗಲ್ಯ ಸಾಮಾಜಿಕ ನಾಟಕದ ಪರಿ.

ಇದನ್ನು ವೀಕ್ಷಿಸಲು ಅಸಲಿ ಪೊಲೀಸರು, ಗಣ್ಯರ ವೇಷತೊಟ್ಟ ಎರಡೂ ಗ್ರಾಮದ ಕೆಲವು ಮುಖಂಡರು ಮೆರವಣಿಗೆ ಮೂಲಕ ಪುರಭವನ ಪ್ರವೇಶಿಸಿ ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದರು.

ರಾಷ್ಟ್ರಪತಿಯಾಗಿ ಗುರುಸ್ವಾಮಿ, ರಾಷ್ಟ್ರಪತಿ ಅಂಗರಕ್ಷಕರಾಗಿ ಯಶವಂತ್ ಮತ್ತು ವಿಜಯ್, ಶಾಸಕರಾಗಿ ಅಂಬಳೆ ಶಿವಣ್ಣ, ಮಂಜು ನಟಿಸಿ ಜನರು ನಂಬುವಂತೆ ಮಾಡಿದ್ದು ವಿಶೇಷ.