ಭೋಪಾಲ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದೇ ಅವರ ಬಹದೊಡ್ಡ ಕನಸನ್ನು ನನಸಾಗಿಸಲು ಮೋದಿ ಸರ್ಕಾರ ನಿರ್ಧರಿಸಿದೆ.
ಅಟಲ್ ಜಿ ಅವರ ಕನಸು ನದಿಗಳ ಜೋಡಣೆ ಯಾಗಿತ್ತು.ಇದೀಗ ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಆ ಮಹಾನ್ ನಾಯಕನ ಕನಸು ಈಡೇರುವ ದಿನಗಳು ಸನ್ನಿಹಿತವಾಗಿದೆ.
ಮಧ್ಯಪ್ರದೇಶದ ಖಜರಾಹೋದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದಾರೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್ ಪಟೇಲ್, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಸಚಿವರಾ್ ರಾಕೇಶ್ ಸಿಂಗ್, ತುಳಸಿ ಸಿಲಾವತ್, ಇಂದಲ್ ಸಿಂಗ್ ಕಂಸಾನಾ, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವೇಳೆ ಹಾಜರಿದ್ದರು.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಯಾದಾಗ ವಾಜಪೇಯಿ ಅವರ ಕನಸು ನದಿಗಳ ಜೋಡಣೆ ಯೋಜನೆ ಜಾರಿಗೆ ತರಲು ಬಯಸಿ ದ್ದರು.ಆಗ ಅದು ಸಾಧ್ಯವಾಗಿರಲಿಲ್ಲ.
ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಟ್ಟಾಗಿ ಈ ಕಾರ್ಯದಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು. ಈಗ ಕೇಂದ್ರದಿಂದ ಅನುದಾನ ನೀಡಲು ಮಂಜೂರಾತಿ ಕೂಡಾ ಸಿಕ್ಕಿದೆ. ಈಗ ಪ್ರಧಾನಿ ನರೇಂದ್ರ ಮೋದಿ ನದಿ ಜೋಡಣೆಗೆ ಅಡಿಪಾಯ ಹಾಕಿದ್ದಾರೆ.