ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿ. ಎಸ್. ಷಡಕ್ಷರಿ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಮತ್ತೆ ಸಿ. ಎಸ್. ಷಡಕ್ಷರಿ ಅವರು ಚುನಾಯಿತರಾಗಿದ್ದಾರೆ‌

ಬೆಂಗಳೂರಿನ‌ ಕಬ್ಬನ್ ಉದ್ಯಾನವನದ ಆವರಣದಲ್ಲಿರುವ ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಂಘಕ್ಕೆ ಚುನಾವಣೆ ನಡೆಯಿತು.

ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣಾ ಕಣದಲ್ಲಿ ಬಿ ಪಿ ಕೃಷ್ಣಗೌಡ ಮತ್ತು ಸಿ ಎಸ್ ಷಡಕ್ಷರಿ ಅವರು ಸ್ಪರ್ಧಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ  ರಾಜ್ಯಾಧ್ಯಕ್ಷ ಸ್ಥಾನದ 2024-2029ನೇ ಅವಧಿಯ ಚುನಾವಣೆ ಇದಾಗಿತ್ತು. ಚುನಾವಣಾಧಿಕಾರಿಯಾಗಿ ಎ.ಹನುಮನರಸಯ್ಯ ಕರ್ತವ್ಯ ನಿರ್ವಹಿಸಿರು.

ಮತ ಎಣಿಕೆ ಸಂಜೆಯೇ ನಡೆದು ಬಿ ಪಿ ಕೃಷ್ಣಗೌಡ 442 ಮತಗಳನ್ನು ಪಡೆದರೆ, ಸಿ, ಎಸ್, ಷಡಕ್ಷರಿ ಅವರು 507 ಮತಗಳನ್ನು ಪಡೆದು‌ ರಾಜ್ಯಾಧ್ಯಕ್ಷರಾಗಿ ಜಯಭೇರಿ ಬಾರಿಸಿದ್ದಾರೆ.ಸಿ ಎಸ್ ಷಡಕ್ಷರಿ ಅವರು ಈಗಾಗಲೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ.ಇದೀಗ ಮತ್ತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿದ್ದಾರೆ.