ಮೈಸೂರಿನ ವಿದ್ಯಾಸಂಸ್ಥೆಗಳಲ್ಲಿ ಆತಂಕ ಸೃಷ್ಟಿಸಿದ ಬಾಂ* ಬೆದರಿಕೆ ಕರೆ

ಮೈಸೂರು: ಮೈಸೂರಿನ ಮೂರು ವಿದ್ಯಾಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಕೆಲಕಾಲ ಆತಂಕ ಸೃಷ್ಟಿ ಯಾಯಿತು.

ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ವಿದ್ಯಾಶ್ರಮ, ಮೇಟಗಳ್ಳಿಯಲ್ಲಿರುವ ಫ್ಯೂಚರ್ ಫೌಂಡೇಶನ್ ಕಾಲೇಜು ಹಾಗೂ ಮೈಕಾ ಶಾಲೆಗೆ ಬೆದರಿಕೆ ಸಂದೇಶ ಬಂದಿದೆ.

ಫ್ಯೂಚರ್ ಫೌಂಡೇಶನ್ ಹಾಗೂ ಮೈಕಾ ಸಂಸ್ಥೆಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಬಂದಿದ್ದರೆ,ವಿದ್ಯಾಶ್ರಮಕ್ಕೆ ಫೋನ್ ಮೂಲಕ ಕರೆ ಬಂದಿದೆ ಎನ್ನಲಾಗಿದೆ.

ಕೂಡಲೇ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪೂರ್ಣ ಪರಿಶೀಲನೆ ನಡೆಸಿ ನಂತರ ಇದು ಹುಸಿಕರೆ ಎಂದು ಖಚಿತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆಲವು ಶಾಲೆಗಳಿಗೆ ಇದೇ ರೀತಿ ಕರೆ ಬಂದಿದ್ದು ಆತಂಕ ಸೃಷ್ಟಿಸಿತ್ತು.

ಇದೀಗ ಮೈಸೂರಿನ ಶಾಲೆಗಳಿಗೂ ಇಂತಹ ಬೆದರಿಕೆಗಳು ಬಂದಿದೆ,ಜತೆಗೆ ಎಲ್ಲೆಡೆ ಹೊಸ ವರ್ಷಾಚರಣೆ ನಡೆಯಲಿರುವುದರಿಂದ ಆತಂಕ ಶುರುವಾಗಿದೆ.

ಕೂಡಲೇ ಆತಂಕ ಸೃಷ್ಟಿಸುವ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡು ಹೊಸ ವರ್ಷಾಚರಣೆಗೆ ಯಾವುದೆ ತೊಂದರೆ‌ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.