ಲಾರಿ ಹರಿದು ಬೈಕ್ ಸವಾರ ಸಾ*:ಶವ ಇಟ್ಟು ಸಂಬಂಧಿಕರ ಪ್ರತಿಭಟನೆ

ಮೈಸೂರು: ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ
ಮೈಸೂರು ಗದ್ದಿಗೆ ಮುಖ್ಯ ರಸ್ತೆ, ಮಾರೇಗೌಡನಹಳ್ಳಿ ಗೇಟ್ ಬಳಿ ನಡೆದಿದೆ.

ಹೆಚ್ ಡಿ ಕೋಟೆ ತಾಲೂಕಿನ ಕೆ.ಬೆಳ್ತೂರು ಗ್ರಾಮದ ತಿಮ್ಮನಾಯಕ ಅವರ ಪುತ್ರ ಸತೀಶ್ (27) ಮೃತಪಟ್ಟ ಬೈಕ್ ಸವಾರ,ಹಿಂಬದಿ ಕುಳಿತಿದ್ದ
ಸತೀಶ್ ಅಕ್ಕನ ಮಗ ಶಿವು (13) ಗಂಭೀರ ಗಾಯಗೊಂಡಿದ್ದಾನೆ.

ಬೈಕ್ ನಲ್ಲಿ ಅಕ್ಕನ ಮಗನ ಜೊತೆ ಮೈಸೂರಿನಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ರೋಡ್ ರೋಲರ್ ಹೊತ್ತು ಗದ್ದಿಗೆ ಕಡೆಯಿಂದ ಬರುತ್ತಿದ್ದ ಲಾರಿ ತಿರುವಿನಲ್ಲಿ ಬಂದು ಬೈಕ್ ಮೇಲೆ ಹರಿದಿದೆ.
ಚಾಲಕ ಜಾವೀದ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತದಿಂದ ರೊಚ್ಚಿಗೆದ್ದ ಸತೀಶ್ ಸಂಬಂಧಿಕರು ರಸ್ತೆಯಲ್ಲೇ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿ,ಮೈಸೂರು- ಗದ್ದಿಗೆ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಜಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿಗಳಾದ ರಘು, ಕರೀಂ ರಾವತರ್ ಭೇಟಿ ನೀಡಿ ಪರಿಶೀಲಿಸಿ ಸತೀಶ್ ಕುಟುಂಬಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು.