ಮೈಸೂರು: ನೂತನ ವರ್ಷಾಚರಣೆಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು,ಮೈಸೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ,ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಕುರಿತು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ನೂತನ ವರ್ಷದ ಶುಭ ಕೋರುವ ನೆಪದಲ್ಲಿ ಅಸಭ್ಯ ವರ್ತನೆ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರ ರಕ್ಷಣೆಗೆ ಪಿಂಕ್ ಗರುಡ ಪಡೆ ಗಸ್ತು ತಿರುಗಲಿದೆ. ವಿದ್ವಂಸಕ ಕೃತ್ಯ ತಡೆಗೆ ಶ್ವಾನ ದಳ ಫೀಲ್ಡ್ ಗಿಳಿಯಲಿದೆ, ಸಂಭ್ರಮದ ನೆಪದಲ್ಲಿ ವೀಲಿಂಗ್ ಡ್ರಾಗ್ ರೇಸ್, ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕ್ಷಿಪ್ರ ಪಡೆ ಸನ್ನದ್ದವಾಗಿದೆ ಎಂದು ತಿಳಿಸಿದ್ದಾರೆ.
ಭದ್ರತೆಗಾಗಿ 4 ಡಿಸಿಪಿ, 12ಎಸಿಪಿ, 32ಪಿಐ, 53ಪಿಎಸ್ ಐ, 112ಎಎಸ್ ಐ, 895 ಹೆಚ್ ಸಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಅಲ್ಲದೆ 8 ಸಿಎಆರ್ ತುಕಡಿ, 4 ಕೆಎಸ್ ಆರ್ ಪಿ, 2 ಕಮಾಂಡೊ ಪಡೆ, 1 ಶ್ವಾನ ದಳ, 2 ಎಎಸ್ ಪಿ ತಂಡಗಳ ಕಣ್ಗಾವಲು ಇರಿಸಲಾಗಿದೆ, ನಿಯಮ ಮೀರಿದರೆ ದಂಡ ಗ್ಯಾರಂಟಿ.
ಮಧ್ಯರಾತ್ರಿ 1ಗಂಟೆ ಒಳಗೆ ಹೊಸ ವರ್ಷದ ಸಂಭ್ರಮಚರಣೆ ಮುಕ್ತಾಯಗೊಳಿಸಲು ಪೋಲೀಸರು ಗಡುವು ನೀಡಿದ್ದಾರೆ.