ಒಂದೆ ಠಾಣೆಯ ಮೂವರು ಅಮಾನತು

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ನಗರದ ಒಂದೆ ಠಾಣೆಯ ಮೂವರು ಸಿಬ್ಬಂದಿಗಳನ್ನ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಟ್ಟಣ ಠಾಣೆಯ ಚಂದ್ರೇಗೌಡ, ಚಾಲಕ ಬಸವರಾಜು ಹಾಗೂ ಮಂಜು ಅವರನ್ನು ಅಮಾನತು ಮಾಡಲಾಗಿದೆ.

ಪ್ರತ್ಯೇಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದ್ದ ಹಿನ್ನಲೆಯಲ್ಲಿ ಈ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ಕವಿತಾ ತಿಳಿಸಿಧ್ದಾರೆ‌.