ಮೈಸೂರು: ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿ ನಿನ್ನೆ ಸಂಜೆ ಅಂಟಿಸಿದ್ದ ‘ಪ್ರಿನ್ಸೆಸ್’ ಸ್ಟಿಕ್ಕರ್ ಅನ್ನು ರಾತ್ರೋರಾತ್ರಿ ಯಾರೊ ತೆಗೆದುಹಾಕಿದ್ದು ಅನುಮಾನಕ್ಕೆ ಎಡೆ ಮಾಡಿದೆ.
ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ನಾಮಕರಣ ಮಾಡುವ ವಿಚಾರ ವಿವಾದದ ಪಡೆದಿದೆ.
ಇದರ ಬೆನ್ನಲ್ಲೇ ಬುಧವಾರ ಸಂಜೆ ಕೆಲ ಸಂಘಟನೆಗಳ ಕಾರ್ಯಕರ್ತರು ಈ ರಸ್ತೆಯ ಹಲವು ಭಾಗಗಳಲ್ಲಿ ಪ್ರಿನ್ಸೆನ್ಸ್ ರಸ್ತೆ ಎಂಬ ಸ್ಟಿಕ್ಕರ್ ಅಂಟಿಸಿ ಪೂಜೆ ಸಲ್ಲಿಸಿದ್ದರು.
ಆದರೆ, ಈ ಸ್ಟೀಕರ್‌ಗಳನ್ನು ರಾತ್ರೋರಾತ್ರಿ ಯಾರೋ ಕಿತ್ತು ಹಾಕಿದ್ದಾರೆ. ಸ್ಟೀಕರ್ ಕಿತ್ತಿದ್ದು ಪೊಲೀಸರಾ ಅಥವಾ ಯಾವುದಾದರೂ ಸಂಘಟನೆಗಳ ಕಾರ್ಯಕರ್ತರಾ ಎಂಬ ಪ್ರಶ್ನೆ ಕಾಡುತ್ತಿದೆ.
ಬುಧವಾರ ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ರೋಡ್ ಎಂದು ಕರ್ನಾಟಕ ರಾಷ್ಟ್ರಸೇನೆ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳವರು ಪ್ರಿನ್ಸೆಸ್ ರಸ್ತೆ ಎಂದು ಸ್ಟಿಕ್ಕರ್ ಅಳವಡಿಕೆ ಮಾಡಿ ಪೂಜೆ ಸಲ್ಲಿಸಿದ್ದರು.
ಚೆಲುವಾಂಬ ಉದ್ಯಾನವನದ ವಿವೇಕಾನಂದ ಪ್ರತಿಮೆ ಬಳಿ ಹಾಗೂ ವಿವಿಧೆಡೆ ಪ್ರಿನ್ಸಸ್ ರಸ್ತೆ ಎಂಬ ನಾಮಫಲಕ ಅಳವಡಿಕೆ ಮಾಡಲಾಗಿತ್ತು.ಸ್ಟಿಕ್ಕರ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೃಷ್ಣಾಜಮ್ಮಣ್ಣಿ ಭಾವಚಿತ್ರ ಇತ್ತು.