ಮೈಸೂರು: ಮೈಸೂರು ನಗರ ಪಾಲಿಕೆಗೆ ಸಂಸದ ಯದುವೀರ್ ಒಡೆಯರ್ ನೀಡಿರುವ ಮ್ಯಾಪ್ ನಕಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ‌್ ಗಂಭೀರ ಆರೋಪ ಮಾಡಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಡ್ಯೂಪ್ಲಿಕೇಟ್ ಮ್ಯಾಪ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ರಾಮಕೃಷ್ಣ ಆಶ್ರಯ 1953 ರಲ್ಲಿ ಆರಂಭವಾಗಿದೆ, ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್
ರೈಲ್ವೆ ಆಸ್ಪತ್ರೆ 1961 ರಲ್ಲಿ ಆರಂಭವಾಗಿದೆ. ಗಣೇಶ್ ಬೀಡಿ ಗೆಸ್ಟ್ ಹೌಸ್, ಕಾಳಿದಾಸ ರಸ್ತೆ ಇದೆ.2016 ರಲ್ಲಿ ನಗರ ಪಾಲಿಕೆ ನೀಡಿರುವ ಮ್ಯಾಪ್ ನಲ್ಲಿ ಕೆಆರ್ ಎಸ್ ಎಂಬ ಹೆಸರಿದೆ.
1997 ರ ಸಿಡಿಪಿ ನಲ್ಲಿ ಕೆಆರ್ ಎಸ್ ರಸ್ತೆ ಇದೆ.
1921 ರಿಂದ 2025 ರ ತನಕ ನೀಡಿರುವ ಎಲ್ಲಾ ದಾಖಲೆಗಳಲ್ಲಿ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿಲ್ಲ ಎಂದು ದಾಖಲೆ ಸಹಿತ ವಿವರಿಸಿದರು.
ನೂರಕ್ಕೆ ನೂರರಷ್ಟು ಪ್ರಿನ್ಸೆಸ್ ಎಂಬ ಹೆಸರಿಲ್ಲ,ಬಿಜೆಪಿಯವರು ಬಟ್ಟೆ ಬಿಚ್ಚಿಕೊಂಡು ಉರುಳು ಸೇವೆ ಮಾಡಿದರೂ ಕೆ ಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಟ್ಟೇ ಇಡುತ್ತೇವೆ ಎಂದು ತಿಳಿಸಿದರು.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರದಿಂದ 5 ಶಾಸಕರು ಸೇರಿ 9 ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಯಾವುದೇ ಷರತ್ತು ಇಲ್ಲದೆ ಬರುವುದಾದರೆ ಬನ್ನಿ ಎಂದು ಹೇಳಿದ್ದೇವೆ. ಫೆಬ್ರವರಿ ಎರಡನೇ ವಾರದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುವುದು. ನಮ್ಮ ಪಕ್ಷಕ್ಕೆ ಬರುತ್ತೇವೆ ಎಂದು ದುಂಬಾಲು ಬಿದ್ದ ಕಾರಣ ಹೈ ಕಮಾಂಡ್ ಒಪ್ಪಿಗೆ ಸೂಚಿಸಲಿದೆ ಎಂದವರು ತಿಳಿಸಿದರು.
ತಮ್ಮ ಸರ್ಕಾರ ಅಧಿಕಾರಾವಧಿಯದಲ್ಲಿ ಎಷ್ಟು ಬಾರಿ ಪ್ರಯಾಣ ದರ ಹೆಚ್ಚಳ ಮಾಡಿದ್ದೇವೆ ಎಂದು ಬಿಜಪಿಯವರು ಹೇಳಲಿ ಎಂ.ಲಕ್ಷ್ಮಣ‌್ ಇದೇ ವೇಳೆ ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಐದು ಬಾರಿ ಬಸ್ ದರ ಹೆಚ್ಚಳ ಮಾಡಿತ್ತು,ಆದರೆ ನಾವು 2015 ರಲ್ಲಿ ಬಸ್ ದರ ಕಡೆಮೆ ಮಾಡಿದ್ದೇವೆ. ಈಗ ನಮ್ಮ ಸರ್ಕಾರ ಶೇಕಡ 15ರಷ್ಟು ಮಾತ್ರ ಬಸ್ ದರ ಹೆಚ್ಚಳ ಮಾಡಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ 5,900 ಕೋಟಿ ಸಾಲ ಮಾಡಿದೆ, ನಮ್ಮ ಸರ್ಕಾರ ಇವರಂತೆ ಸಾಲ ಮಾಡಿದೆಯೆ ಎಂದು ಪ್ರಶ್ನಿಸಿದರು. ಈ ತನಕ 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಹೆಚ್.ವಿ.ರಾಜೀವ್ ಮಾತನಾಡಿ, ಸಿದ್ದರಾಮಯ್ಯ ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ.
ಇಂತಹ ವ್ಯಕ್ತಿ ಹೆಸರನ್ನು ರಸ್ತೆಗೆ ಇಡಲು ಕ್ಷುಲಕವಾಗಿ ಮಾತಾಡುವುದು ಸರಿಯಲ್ಲ.
ಸಿಡಿಪಿ ನಲ್ಲಿ ಕೆಆರ್ ಎಸ್ ರಸ್ತೆ ಅಂತ ಇದೆ, ಎಲ್ಲೂ ಕೂಡ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರಸ್ ಮುಖಂಡ ಶಿವಣ್ಣ ಅವರು ಮಾತನಾಡಿ, ಜ. 7ರಂದು ಕರೆ ನೀಡಲಾಗಿರುವ ಮೈಸೂರು ಬಂದ್ ಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಿರಿ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.