ಮೈಸೂರು: ತಾಯಿಯೇ ದೇವರೆಂದು ನಾವೆಲ್ಲ ನಂಬಿದ್ದೇವೆ,ಆದರೆ ಇಲ್ಲೊಬ್ಬೊಳು ಕೆಟ್ಟ ಅಮ್ಮ ತಾನು ಹೆತ್ತ ಮಗುವನ್ನೆ ಚರಂಡಿಯಲ್ಲಿ ಬಿಸಾಡಿ ಹೋಗಿರುವ ಹೇಯ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆಯ ರಾಜೇಗೌಡನ ಹುಂಡಿ ಗ್ರಾಮದ ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ.
ಆ ಪುಟ್ಟ ಕಂದ ಕೊರೆವ ಚಳಿಯಲ್ಲಿ ಇಡೀ ರಾತ್ರಿ ಬರಿಮೈಯಲ್ಲಿ ಚರಂಡಿ ನೀರಿನಲ್ಲಿ ಹಸಿವಿನಲ್ಲಿ ಒದ್ದಾಡಿದೆ.
ಬೆಳಗಿನ ಜಾವ ಮಗುವಿ ಅಳು ಕೇಳಿ ಗ್ರಾಮಸ್ಥರು ಮಮ್ಮಲ ಮರುಗಿ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ,ತಕ್ಷಣ ಸ್ಥಳಕ್ಕೆ ಬಂದು ಮಗುವನ್ನುಎತ್ತಿ ಪ್ರಾಥಮಿಕ ಆರೈಕೆ ಮಾಡಿ ಎಚ್.ಡಿ.ಕೋಟೆ ತಾಯಿ ಮಗು ಆರೈಕೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಆಶಾ ಕಾರ್ಯಕರ್ತೆ ಸರೋಜಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಅವರ ಮಾನವೀಯತೆಯನ್ನ ಸ್ಥಳೀಯರು ಪ್ರಶಂಸಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಎಚ್.ಡಿ.ಕೋಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.