ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ !

ಚಾಮರಾಜನಗರ: ಇತ್ತೀಚೆಗೆ ಯುವಕರೇ‌ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ,ಆದರೆ‌ ಇದೀಗ ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ ನಿಂದ ಸಾವಿಗೀಡಾಗುತ್ತಿರುವುದು ಆತಂಕಕ್ಕೀಡು ಮಾಡಿದೆ.

ಹಿಂದೆಲ್ಲ ತೂಕ ಹೆಚ್ಚಳದಿಂದ, ರಕ್ತದೊತ್ತಡದಿಂದ ಈ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ ಚಿಕ್ಕಮಕ್ಕಳಿಗೂ ಹಾರ್ಟ್‌ ಅಟ್ಯಾಕ್‌ ಆಗುತ್ತಿದೆ ಇದು ಚಿಂತೆಯ‌ ವಿಷಯವಾಗಿದೆ.

ಇದಕ್ಕೆ ಚಾಮರಾಜನಗರದಲ್ಲಿ ನಡೆದ ಘಟನೆ‌ ಸಾಕ್ಷಿಯಾಗಿದೆ.

ಚಾಮರಾಜನಗರದ 3ನೇ ತರಗತಿಯ ವಿದ್ಯಾರ್ಥಿನಿಗೆ ಹೃದಯಾಘಾತ ಸಂಭವಿಸಿದೆ. ಚಾಮರಾಜನಗರದ ಸೆಂಟ್‌ ಫ್ರಾನ್ಸಿಸ್‌ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್‌ ತೋರಿಸಲೆಂದು ಹೋಗುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ.

ಟೀಚರ್‌ ಕಣ್ಣೆದುರೇ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಶಿಕ್ಷಕರು ಕರೆತಂದಿದ್ದಾರೆ,ಆದರೆ ದುರಾದೃಷ್ಟವಶಾತ್‌ ಆಸ್ಪತ್ರೆಗೆ ತರುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.