ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು ಬೋರ್ವೆಲ್ ಹಗರಣ ಸಂಬಂಧ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ
ಬಿಬಿಎಂಪಿ 900 ಕೋಟಿ ಹಗರಣದ ಬೆನ್ನತ್ತಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬಿಬಿಎಂಪಿ ಚೀಫ್ ಇಂಜಿನಿಯರ್ ಕಚೇರಿ ಮೇಲೆ ದಾಳಿ ನಡೆದಿದ್ದು ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳ ಲಾಗಿದೆ.
2016 ರಿಂದ 2019 ರವರೆಗೆ ಬೋರ್ವೆಲ್ ಕೊರೆಸಿದ್ದ ಪ್ರಕರಣದಲ್ಲಿ ಭಾರೀ ಗೋಲ್ಮಾಲ್
ಆಗಿದೆ ಎಂದು ದೂರಲಾಗಿತ್ತು. ಎಲ್ಲೆಲ್ಲಿ ಬೋರ್ವೆಲ್ ಗಳನ್ನ ಕೊರೆಸಿದ್ದೀರಿ ಎಷ್ಟು ವೆಚ್ಚವಾಗಿತ್ತು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಇಡಿ ಅಧಿಕಾರಿಗಳು ಕೇಳಿದ್ದಾರೆ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ ಅವರನ್ನು ಈ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಛೀಫ್ಇಂಜಿನಿಯರ್ ಪ್ರಹ್ಲಾದ್ ಅವರು ಮಾತನಾಡಿ,ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನಾವು ಒದಗಿಸಿದ್ದೇವೆ ದಾಖಲೆ ಪರಿಶೀಲನೆಗಾಗಿಯೇ ಒಂದು ರೂಮ್ ಸಿದ್ದಮಾಡಿಕೊಟ್ಟಿದ್ದೇವೆ ಅವರು ಎಲ್ಲ ತಪಾಸಣೆ ಮಾಡುತ್ತಿದ್ದಾರೆ ನಾವು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇವೆ ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.