ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಮೈಸೂರು: ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಅಲಂಕಾರಗಳನ್ನು ಸ್ವಾಮಿಗೆ ನೆರವೇರಿಸಲಾಯಿತು.

ಮುಂಜಾನೆಯಿಂದಲೇ ಭಕ್ತ ಸಾಗರವೇ ದೇವಾಲಯಕ್ಕೆ ಆಗಮಿಸಿ, ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಈ ವೇಳೆ ಅವಧೂತ ಧತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ಇಂದು ಸ್ವಾಮಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.

ಲೋಕಕಲ್ಯಾಣಾರ್ಥವಾಗಿ ಪೂಜೆ ಮಾಡಿ‌ ನಮ್ಮ ಕರ್ನಾಟಕ ರಾಜ್ಯ, ಕರ್ನಾಟಕದ ಪ್ರಜೆಗಳು, ನಮ್ಮ ದೇಶ, ಇಡೀ ಪ್ರಪಂಚ ಚೆನ್ನಾಗಿರಲಿ ಶಾಂತಿ ಇರಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದು ಹೇಳಿದರು.

ಶುಕ್ರವಾರದ ದಿನ ವೈಕುಂಠ ಏಕಾದಶಿ ಬಂದಿರುವುದು ತುಂಬಾ ವಿಶೇಷ, ಇವತ್ತು ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ ನಮ್ಮ ಆಶ್ರಮದಲ್ಲೇ ಬೆಳೆದಿರುವ ಪುಷ್ಪಗಳಿಂದ ಪೂಜೆ ಮಾಡಿ ಅಲಂಕರಿಸಲಾಗಿದೆ, ಸ್ವಾಮಿಗೆ ವೈ ಜಯಂತಿ ಮಾಲ ಅಂದರೆ ಏಳು ತರಹದ ಪುಷ್ಪಗಳಿಂದ ಮತ್ತು ತುಳಸಿ ಪ್ರಿಯ ಸ್ವಾಮಿಗೆ ತುಳಸಿಯಿಂದ ಮತ್ತು ಪಾರಿಜಾತ ಹೂಗಳಿಂದ ಅಲಂಕಾರ ಮಾಡಿರುವುದು ಇವತ್ತಿನ ವಿಶೇಷ ಎಂದು ಬಣ್ಣಿಸಿದರು.

ಬೆಳಿಗ್ಗೆ ಎರಡು ಗಂಟೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ ಮಾಡಲಾಗಿದೆ, ಈಗಾಗಲೇ ತಿರುಪಾವೈ ಪಾರಾಯಣ, ಧನುರ್ಮಾಸ ಪೂಜೆ, ವಿಷ್ಣು ಸಹಸ್ರನಾಮ ಎಲ್ಲವೂ ಆಗಿದೆ. ಭೂ‌ ಸಮೇತ ವೆಂಕಟೇಶ್ವರ ಸ್ವಾಮಿ ಅಲಂಕಾರ ಮಾಡಲಾಗಿದೆ ಇದರಂದ ಎಲ್ಲರಿಗೂ ಎಲ್ಲ ರೀತಿಯ ಶಕ್ತಿ ಬರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ವೈಕುಂಠ ಏಕಾದಶಿ ದಿನ ವೈಕುಂಠದಲ್ಲೂ ಕೂಡ ಉತ್ತರ ದ್ವಾರ ತೆರೆಯಲಾಗಿರುತ್ತದೆ ದೇವಾನುದೇವತೆಗಳು, ಋಷಿಮುನಿಗಳು, ಸಾಧುಗಳು ಶ್ರೀ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರ ಪ್ರತಿಕವಾಗಿ ಇಂದು ಉತ್ತರ ದ್ವಾರದಲ್ಲಿ ಬಂದು ದೇವರ ದರ್ಶನ ಮಾಡಿದರೆ ಒಳ್ಳೆಯದು ಎಂದು ನಂಬಲಾಗಿದೆ.ಉತ್ತರ ಧ್ವಾರದಿಂದ ಪ್ರವೇಶಿಸಿ ಸ್ವಾಮಿಯ ದೃಷ್ಟಿ ಬಿದ್ದರೆ ಆಧ್ಯಾತ್ಮಿಕ ಚೈತನ್ಯ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ವೇದ ಶಾಸ್ತ್ರಗಳು ಹೇಳುತ್ತವೆ ಹಾಗಾಗಿ ಇಂದಿನ ದಿನ ವೈಕುಂಠ ದ್ವಾರ ಅಂದರೆ ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆಯುವುದು ರೂಢಿಯಾಗಿದೆ ಎಂದು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.