ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ

(ವರದಿ: ನಾಗರಾಜ್)

ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪುರಾಣ ಪ್ರಸಿದ್ದ

ಆದಿ ರಂಗನಾಥ ಸ್ವಾಮಿಗೆ 35ನೇ ವರ್ಷದ ಬೆಣ್ಣೆ ಅಲಂಕಾರ ಹಾಗೂ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಮಂದಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ದೇವಸ್ಥಾನದ ಮುಂಭಾಗದಿಂದ ಹಿಡಿದು 200 ಮೀಟರ್ ವರೆಗೆ ದೀಪಗಳನ್ನು ಇಟ್ಟು ಸಂಧ್ಯಾ ಕಾಲದಲ್ಲಿ ಹೋಮವನ್ನು ಮಾಡಿ  ದೀಪವನ್ನ ಪ್ರಜ್ವಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಆದಿ ರಂಗನಿಗೆ ಬೆಣ್ಣೆಯ ಅಲಂಕಾರ ಮಾಡಲಾಯಿತು.ಭಕ್ತರು ವೈಕುಂಠ ದ್ವಾರ  ಪ್ರದಕ್ಷಣೆ ಮಾಡಿ  ದೇವರ ಕೃಪೆಗೆ ಪಾತ್ರರಾದರು.

ನಮ್ಮ ರೈತಪಿ ವರ್ಗದವರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಪೂಜೆ ಸಲ್ಲಿಸಿ, ಹಸು ಕರು ಮತ್ತು ರಾಸುಗಳನ್ನು ತೊಳೆದು ಸಿಂಗಾರ ಮಾಡಿ ಹುಲ್ಲಿನ ಕಂತೆಗಳನ್ನ ಹಾಕಿ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದರು.

ಮಕರ ಸಂಕ್ರಾಂತಿ ಹಿನ್ನೆಲೆ ಹೀಗಿದೆ..!

ಮಕರ ಸಂಕ್ರಾಂತಿ ಹಬ್ಬವನ್ನೇಕೇ ನಾವು ಆಚರಿಸಬೇಕು.. ಮಕರ ಸಂಕ್ರಾಂತಿ ಹಬ್ಬದ ಪೌರಾಣಿಕ ಹಿನ್ನೆಲೆ ಮತ್ತು ದಂತಕಥೆಗಳು ಹೀಗಿದೆ..

ಮಕರ ಸಂಕ್ರಾಂತಿಯ ದಿನದಿಂದ ಸೂರ್ಯನು ಉತ್ತರಕ್ಕೆ ತಿರುಗುತ್ತಾನೆ ಮತ್ತು ಈ ಹಬ್ಬವನ್ನು ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ.

ಅಖಂಡ ಭಾರತದೆಲ್ಲೆಡೆ ಬೆಳೆಗಳು ಬಂದ ಖುಷಿಯಲ್ಲಿ ಈ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಈ ದಿನ ಅನೇಕ ಐತಿಹಾಸಿಕ ಮತ್ತು ಪೌರಾಣಿಕ ಘಟನೆಗಳು ನಡೆದಿವೆ.

ಈ ಹಬ್ಬದ ದಂತಕಥೆ ಮತ್ತು ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ ಬನ್ನಿ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು, ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನದಿಂದ ದೇವತೆಗಳ ಆರು ತಿಂಗಳ ದಿನ ಪ್ರಾರಂಭವಾಗುತ್ತದೆ, ಇದು ಆಷಾಢ ಮಾಸದವರೆಗೆ ಇರುತ್ತದೆ.

ಈ ದಿನ ಸೂರ್ಯನು ತನ್ನ ಮಗನಾದ ಶನಿಯ ಮನೆಗೆ ಒಂದು ತಿಂಗಳು ಹೋಗುತ್ತಾನೆ, ಏಕೆಂದರೆ ಮಕರ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ.

ಮಕರ ಸಂಕ್ರಾಂತಿಯ ದಿನದಂದು, ಗಂಗಾ ದೇವಿಯು ಭಗೀರಥನನ್ನು ಅನುಸರಿಸಿ, ಕಪಿಲ ಮುನಿಯ ಆಶ್ರಮದ ಮೂಲಕ ಹೋಗಿ ಸಾಗರವನ್ನು ಸೇರಿದಳು ಎನ್ನುವ ಪುರಾಣ ಕಥೆಯಿದೆ.

ಭಗೀರಥ ಮಹಾರಾಜನು ಈ ದಿನದಂದು ತಮ್ಮ ಪೂರ್ವಜರಿಗೆ ತರ್ಪಣವನ್ನು ಅರ್ಪಿಸಿದ್ದನು. ಆದ್ದರಿಂದ ಮಕರ ಸಂಕ್ರಾಂತಿಯಂದು ಗಂಗಾಸಾಗರದಲ್ಲಿ ಜಾತ್ರೆ ನಡೆಯುತ್ತದೆ.

ರಾಜ ಭಗೀರಥನು ತನ್ನ ಪೂರ್ವಜರಿಗೆ ಗಂಗಾಜಲ, ಅಕ್ಷತೆ, ಎಳ್ಳುಗಳಿಂದ ಶ್ರಾದ್ಧವನ್ನು ಅರ್ಪಿಸಿದ್ದನು. ಅಂದಿನಿಂದ ಇಂದಿನವರೆಗೂ ಮಾಘ ಮಕರ ಸಂಕ್ರಾಂತಿಯಂದು ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ಶ್ರಾದ್ಧ, ತರ್ಪಣ ಪದ್ಧತಿಗಳು ರೂಢಿಯಲ್ಲಿದೆ. ಕಪಿಲ ಮುನಿಯ ಆಶ್ರಮದಲ್ಲಿ ಮಕರ ಸಂಕ್ರಾಂತಿಯಂದು ಗಂಗೆಯನ್ನು ಪ್ರತಿಷ್ಠಪಿಸಲಾಯಿತು. ರಾಜ ಭಗೀರಥನ ಪೂರ್ವಜರು ಪವಿತ್ರ ಗಂಗಾಜಲದ ಸ್ಪರ್ಶದಿಂದ ಸ್ವರ್ಗವನ್ನು ಪಡೆದರು.