ಮೈಸೂರು: ಬಸ್ ನಲ್ಲಿ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿ ಪ್ರಧಾನಿ ನರೇಂದ್ರ ಮೋದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಗೆ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿದ ಘಟನೆ ಮೈಸೂರಿನ ಸ್ಯಾನಿಟೋರಿಯಂ ಬಳಿ ನಡೆದಿದೆ.
ಇಬ್ಬರು ಮಹಿಳೆಯರು ಕತ್ತಿನ ಪಟ್ಟಿ ಹಿಡಿದು ಧರ್ಮದೇಟು ಕೊಟ್ಟು ಮತ್ತೆ ಈ ರೀತಿ ನಡೆದುಕೊಳ್ಳದಂತೆ ತಾಕೀತು ಮಾಡಿದ್ದಾರೆ.
ಇದೀಗ ವ್ಯಕ್ತಿಗೆ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸ್ ನಲ್ಲಿ ವ್ಯಕ್ತಿ ಅನುಚಿತವಾಗಿ ವರ್ತಿಸಿದಾಗ ಮಹಿಳೆ ಪ್ರಶ್ನಿಸಿದ್ದಾರೆ.ಈ ಬಗ್ಗೆ ವಿರೋಧಿಸಿದ ಮಹಿಳೆಗೆ ಮರ್ಡರ್ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದಾನೆ.ವಿವಿ ಮೊಹಲ್ಲಾಗೆ ಬಾ ನೋಡ್ಕೊತೀನಿ ಎಂದು ಸವಾಲು ಹಾಕಿದ್ದಾನೆ.
ಜೊತೆಗೆ ಪ್ರಧಾನಿ ಮೋದಿಯನ್ನ ಸಾರ್ವಜನಿಕವಾಗಿ ಕೆಟ್ಟದಾಗಿ ನಿಂದಿಸಿದ್ದಾನೆ.
ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಮಹಿಳೆಯರೆಲ್ಲಾ ಸೇರಿ ಏಟು ಕೊಟ್ಟು ಎಚ್ಚರಿಕೆ ನೀಡಿದ್ದಾರೆ.