ಮೈಸೂರು: ಪುರಾತತ್ವ ಇಲಾಖೆಗೆ ಸೇರಿದ ಪುರಾತನ ಕಟ್ಟಡಗಳು ಹಾಗೂ ನೂರಾರು ಮಂದಿ ರೈತರ ಜಮೀನು ಆರ್ ಟಿ ಸಿ ಯಲ್ಲಿ ವಕ್ಫ್ ಹೆಸರು ನಮೂದಾಗಿರುವುದನ್ನು ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಶ್ರೀರಂಗಪಟ್ಟಣ ಬಂದ್ ಯಶಸ್ವಿಯಾಯಿತು.
ಶ್ರೀರಂಗಪಟ್ಟಣ ಬಂದ್ ಗೆ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಪಟ್ಟಣದಾದ್ಯಂತ ಬೆಳಗಿನಿಂದಲೇ ಮಾಲೀಕರು ಅಂಗಡಿ,ಮುಂಗಟ್ಟುಗಳನ್ನು ಬಂದ್ ಮಾಡಿದರು
ಹಲವಾರು ಕನ್ನಡ ಸಂಘಟನೆಗಳು, ಹಿಂದೂಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ವಿವಿಧ ಸಂಘಟನೆಗಳವರು, ರೈತರು, ರೈತ ಮುಖಂಡರುಗಳು, ಸಾರ್ವಜನಿಕರು, ಹಿಂದೂ ಸಂಘಟನೆಗಳವರು ಜಮಾಯಿಸಿದ್ದರು, ರೈತರು ಹಸು, ಎತ್ತಿನ ಗಾಡಿಗಳನ್ನು ಸಹ ಪ್ರತಿಭಟನೆಗೆ ತಂದಿದ್ದರು.
ಕುವೆಂಪು ವೃತದಿಂದ ಆರಂಭವಾಗದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿಗೆ ವರೆಗೂ ತೆರಳಿತು.
ಶ್ರೀರಂಗಪಟ್ಟಣದಲ್ಲಿನ ಹಲವಾರು ಪುರಾತನ ಕಟ್ಟಡಗಳು ಹಾಗೂ ನೂರಾರು ಮಂದಿ ರೈತರ ಜಮೀನು ಆರ್‌ಟಿಸಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದನ್ನು ವಿರೋಧಿಸಲಾಯಿತು.
ಈ ವೇಳೆ ಪ್ರತಿಭಟನಾ ನಿರತರು ಬೇಕೇಬೇಕು ನ್ಯಾಯ ಬೇಕು,ರಾಜ್ಯ ಸರ್ಕಾರಕ್ಕೆ ದಿಕ್ಕಾರ ಹೀಗೆ ಹಲವಾರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆಯು ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಬಳಿ ಸಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಸೀದಿ ಬಳಿ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು.
ಶ್ರೀರಂಗಪಟ್ಟಣ ಪ್ರವಾಸಿ ತಾಣ ಆಗಿರುವ ಹಿನ್ನೆಲೆಯಲ್ಲಿ ಇಂದು ಜಾಮಿಯಾ ಮಸೀದಿಗೆ ಸಾರ್ವಜನಿಕರ ಭೇಟಿಯನ್ನು ರದ್ದುಪಡಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಶ್ರೀರಂಗಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿದೆ.