ನಗರ್ಲೆ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರ ನಿಷೇಧ: ಹಾರಾಡುತ್ತಿವೆ ಫ್ಲೆಕ್ಸ್ ಗಳು!

ಮೈಸೂರು: ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು, ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ,ಹೀಗೆ ಬರೆದ ಫ್ಲೆಕ್ಸ್ ಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ.

ಇಂತಹ ಸಂದೇಶವಿರುವ ಫ್ಲೆಕ್ಸ್ ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ ವರುಣಾ ವಿಧಾನಸಭಾ ಕ್ಷೇತ್ರದ ನಗರ್ಲೆ ಗ್ರಾಮದಲ್ಲಿ ಎಲ್ಲೆಡೆ ಹಾರಾಡುತ್ತಿವೆ.

ಗ್ರಾಮದ ವಿವಿಧೆಡೆ ಈ ರೀತಿಯ ಭಿತ್ತಿ ಫಲಕಗಳನ್ನು ಅಳವಡಿಸಲಾಗಿದೆ.

ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಇಂತಹ ಸಂದೇಶ ವುಳ್ಳ ಫ್ಲೆಕ್ಸ್ ಅಳವಡಿಸಿರುವುದು ಕಾಂಗ್ರೆಸ್ ಮುಖಂಡರಿಗೆ ಮುಜುಗರ ತಂದಿದೆ.

ನಗರ್ಲೆ ಗ್ರಾಮದ ಅಭಿವೃದ್ದಿ ಬಗ್ಗೆ ಬೇಸತ್ತಿರುವ ಗ್ರಾಮಸ್ಥರು ಇಂತಹ ಭಿತ್ತಿಪತ್ರಗಳನ್ನು ಹಾಕುವ ಮೂಲಕ ಕಾಂಗ್ರೆಸ್ ನಾಯಕರ ನಿಷೇಧಕ್ಕೆ ಮುಂದಾಗಿದ್ದಾರೆ.

ಯಾವುದೇ ಕಾಂಗ್ರೆಸ್ ಮುಖಂಡರು ಗ್ರಾಮಕ್ಕೆ ನಿಷೇಧಿಸಿದೆ ಎಂಬ ಸಂದೇಶ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿಗಳ ತವರಿನಲ್ಲೇ ಇಂತಹ ಸಂದೇಶ ರವಾನೆ ಆದರೆ ಮುಂದಿನ ಬೆಳವಣಿಗೆ ಹೇಗಿರುತ್ತದೆ ಎಂಬ ವಿಷಯವೂ ಚರ್ಚೆಗೆ ಗ್ರಾಸ ಒದಗಿಸಿದೆ.