ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ಒಂದು ರೈಲಿನಿಂದ ಇಳಿದು ಪ್ರಯಾಣಿಕರು ಹಳಿಗಳ ಮೇಲೆ ಇಳಿದು ಬರುತ್ತಿದ್ದಾಗ ಎದುರು ದಿಕ್ಕಿನಿಂದ ಬರುತ್ತಿದ್ದ ಇನ್ನೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ,ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಈ ಘೋರ ದುರಂತ ಸಂಭವಿಸಿದೆ.
ಲಕ್ನೊ – ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಯಾವುದೊ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹಬ್ಬಿದೆ.ಹಾಗಾಗಿ ಯಾರೊ ಚೈನು ಎಳೆದಿದ್ದಾರೆ.
ಅಪಾಯದ ಅರಿವಿಲ್ಲದ ಜನರಿಗೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವು ನೋವುಗಳು ಸಂಭವಿಸಿವೆ.
ಮುಂಬೈನಿಂದ 400 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿರುವ ಪಚೋರಾ ಬಳಿಯ ಮಾಹೆಜಿ ಮತ್ತು ಪರ್ಧಡೆ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ.
ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ಒಂದು ಬೋಗಿಯೊಳಗೆ ಬ್ರೇಕ್-ಬೈಂಡಿಂಗ್ (ಜಾಮಿಂಗ್) ಕಾರಣದಿಂದಾಗಿ ಬೆಂಕಿಯ ಕಿಡಿಗಳು ಕಾಣಿಸಿದೆ, ಇದರಿಂದ ಕೆಲವು ಪ್ರಯಾಣಿಕರು ಭಯಭೀತರಾಗಿ ದ್ದಾರೆ,
ಅವರಲ್ಲಿ ಯಾರೊ ಸರಪಳಿಯನ್ನು ಎಳೆದಿದ್ದಾರೆ, ಕೆಲವರು ಪ್ರಾಣ ಉಳಿಸಿಕೊಳ್ಳಲು ಹಳಿಗಳ ಮೇಲೆ ಹಾರಿದ್ದಾರೆ. ಅದೇ ಸಮಯದಲ್ಲಿ, ಕರ್ನಾಟಕ ಎಕ್ಸ್‌ಪ್ರೆಸ್ ಅವರ ಮೇಲೆ ಹಾದು ಹೋಗಿ ಈ ಘನಘೋರ ದುರಂತ ಸಂಭವಿಸಿದೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘೋರ ದುರಂತಕ್ಕೆ ಮಹಾರಾಷ್ಟ್ರ ಸಿಎಂ ತೀವ್ರ ದುಖ ವ್ಯಕ್ತಪಡಿಸಿದ್ದಾರೆ.