ಮೈಸೂರು: ಚಲಿಸುತ್ತಿದ್ದ ಬಸ್ ನಿಂದ ಉಗುಳಲು ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್ ಆಗಿ ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕು ತಾಲೂಕು ಸಿಂಧುವಳ್ಳಿ ಸಮೀಪ ಈ ಘಟನೆ ನಡೆದಿದ್ದು ಗುಂಡ್ಲುಪೇಟೆ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ(45) ಮೃತಪಟ್ಟಿದ್ದಾರೆ.
ಸಾಮಾನ್ಯವಾಗಿ ಬಸ್ ಗಳಲ್ಲಿ ಚಾಲಜ ನಿರ್ವಾಹಕರು ಯಾರಾದರೂ ತಲೆ ಅಥವಾ ಕೈ ಹೊರ ಹಾಕಿದರೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.ಆದರೂ ಇಂತಹ ಘಟನೆಗಳು ನಡೆಯುತ್ತಲೆ ಇರುವುದು ನಿಜಕ್ಕೂ ದುರಂತ.
ಮೈಸೂರಿನಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಕೆಎಸ್ ಆರ್.ಟಿ ಸಿ ಬಸ್ ನಲ್ಲಿ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದರು.
ಸಿಂಧುವಳ್ಳಿ ಸಮೀಪ ಬಸ್ ಮುಂದೆ ಹೋಗುತ್ತಿದ್ದ ವಾಹನವೊಂದನ್ನ ಓವರ್ ಟೇಕ್ ಮಾಡುವ ಸಂಧರ್ಭದಲ್ಲಿ ಶಿವಲಿಂಗಮ್ಮ ಉಗುಳಲು ತಲೆ ಹೊರಹಾಕಿದ್ದಾರೆ.ಆಗ ಪಕ್ಕದಲ್ಲಿ ಸಾಗುತ್ತಿದ್ದ ವಾಹನ ವೇಗವಾಗಿ ಚಲಿಸಿ ಶಿವಲಿಂಗಮ್ಮನ ಕತ್ತು ಹಾಗೂ ಕೈ ಕಟ್ ಆಗಿದೆ.
ಶಿವಲಿಂಗಮ್ಮ ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿದ್ದಾರೆ.ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ಭಯಪಟ್ಟರು.
ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.