(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಏಕಮುಖ ಸಂಚಾರ ಮಾಡಿದರೆ ಅಪಾಯ ಕಟ್ಟಿತ್ತ ಬುತ್ತಿ ಅಂತ ಗೊತ್ತಿಧ್ದರೂ ವಾಹನ ಸವಾರರು ಏಕಮುಖ ಸಂಚಾರ ಮಾಡುವುದರಿಂದ ಮಕ್ಕಳ ಪ್ರಾಣಹಾನಿಗೆ ಎಡೆ ಮಾಡಿದ್ದಾರೆ.
ನಗರದ ಜೋಡಿರಸ್ತೆ ಸಮೀಪ ಖಾಸಗಿ ಶಾಲಾ- ಕಾಲೇಜು ಇದ್ದು, ಜೋಡಿರಸ್ತೆ ಒಂದು ಭಾಗದಲ್ಲಿ ನೂರಾರು ವಿದ್ಯಾರ್ಥಿಗಳು,ಕೆಲ ಉಪನ್ಯಾಸಕರು ಏಕ ಮುಖ ಸಂಚಾರ ಮಾಡಲಾರಂಬಿಸುತ್ತಾರೆ.
ಇದರ ಜೊತೆ ಶಾಲಾ ಮಕ್ಕಳನ್ನ ಹೊತ್ತ ಆಟೊಗಳು ಕೂಡ ಏಕಮುಖಸಂಚಾರ ಮಾಡುವುದರಿಂದ ದಿನನಿತ್ಯ ಸಣ್ಣಪುಟ್ಟ ಅಪಘಾತಗಳು ಆಗುತ್ತಲೇ ಇವೆ.
ಅವೈಜ್ಞಾನಿಕ ರಸ್ತೆ, ಡಿವೈಡರ್ ಗಳಿಂದ ಅಪಘಾತಗಳು ಹೆಚ್ಚಾಗುತ್ತಿದೆ..ಇತ್ತೀಚೆಗೆ ಕಾಲೇಜಿನ ಶಿಕ್ಷಕಿಯೊಬ್ಬರಿಗೆ ಅಪಘಾತವಾದಾಗ ಡಿವೈಡರ್ ಮುಚ್ಚಿದ್ದರು. ಇದರಿಂದ ಮತ್ತಷ್ಟು ಏಕಮುಖ ಸಂಚಾರ ವ್ಯವಸ್ಥೆ ಹೆಚ್ಚಾಗತೊಡಗಿದವು.
ಕಾಲೇಜಿನಲ್ಲಿ ಎರಡು ದ್ವಾರಗಳಿದ್ದು ಒಂದು ದ್ವಾರ ಮುಚ್ಚಿದರೆ ಏಕಮುಖ ಸಂಚಾರ ಜೊತೆಗೆ ಅನದಿಕೃತ ವಾಹನ ನಿಲುಗಡೆ, ಆಟೊ ಪಾರ್ಕಿಂಗ್ ತಡೆದು ವಾಹನ ದಟ್ಟಣೆಯಿಂದ ಸಂಚಾರ ಕಿರಿಕಿರಿ ತಪ್ಪಿಸಬಹುದು ಎನ್ನತ್ತಾರೆ ವಾಹನ ಸವಾರೊಬ್ಬರು.
ಪ್ರತಿನಿತ್ಯ ಹೊರವಲಯದಲ್ಲಿ ದಂಡ ವಿದಿಸುವ ಆರಕ್ಷಕರು ಕಾಲೇಜಿನ ಮುಂಭಾಗ ಏಕಮುಖ ಸಂಚಾರ, ಅಪ್ರಾಪ್ತರ ವಾಹನ ಚಾಲನೆ ಸಂಬಂದ ಪ್ರಕರಣ ದಾಖಲಿಸಿದರೆ ಇಂತ ವ್ಯವಸ್ಥೆ ತಗ್ಗಿಸಬಹುದಾಗಿದೆ.
ಅಪ್ರಾಪ್ತರ ವಾಹನ ಚಾಲನೆ ಸಂಬಂದ ಈಗಾಗಲೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ,ಇಂದು ವಿಶೇಷ ಕಾರ್ಯಚರಣೆ ನಡೆಸಿ ದಂಡ ವಿದಿಸದೆ ಅರಿವು ಮೂಡಿಸುವ ಕಾರ್ಯ ಮಾಡಿದ್ದೇವೆ ಎಂದು ಎಸ್ಪಿ.ಬಿ.ಟಿ.ಕವಿತ ಅವರು ತಿಳಿಸಿದರು.