ಮೈಸೂರು: ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ಫೆಬ್ರವರಿ 1 ಮತ್ತು 2 ರಂದು ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲದ ಆವರಣದಲ್ಲಿರುವ ಕಾವೇರಿ ಮತ್ತು ನಳ ಸಭಾಂಗಣದಲ್ಲಿ ಈ ಸಮಾರಂಭ ನಡೆಯಲಿದೆ.
ಖ್ಯಾತ ನಟ,ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಮನೇಕ್ ಪ್ರೇಮಚಂದ್ ಮತ್ತು ಕೆಎಸ್ಒಯು ಉಪಕುಲಪತಿ ಶರಣಪ್ಪ ಹಲಸೆ ಅವರು ಉದ್ಘಾಟಿಸಲಿದ್ದಾರೆ.
ಪರಿದೃಶ್ಯ ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ.
ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತದಿಂದ 985 , ಇರಾನ್ ಇಂದ 413, ಸ್ಪೇನ್ ಇಂದ 138, ಫ್ರಾನ್ಸ್ 137, ಬ್ರೆಜಿಲ್ 108,ಚೀನಾ 99,ಇಂಡೋನೇಷಿಯಾ 91, ಟರ್ಕಿ 88, USA 82 , ಇಟಲಿ 81 ಮುಂತಾದ ದೇಶಗಳಿಂದ 3123 ಸಿನಿಮಾಗಳು ಬಂದಿವೆ. ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಾ.ಎಲ್.ಮುರುಗನ್ ಅವರು ಉಪಸ್ಥಿತರಿರುವರು.