ಚಾಮರಾಜನಗರ: ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ನಾಡ ಬಂದೂಕಿನಿಂದ ಕಾಡುಮೊಲ ಬೇಟೆಯಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಒಬ್ಬನನ್ನು ಬಂಧಿಸಲಾಗಿದೆ.
ಕೃಷ್ಣಪುರ ಗ್ರಾಮದ ಮಾದಶೆಟ್ಟಿ ಅಲಿಯಾಸ್ ಕರಿಮಾದಶೆಟ್ಟಿ( 48)ಬಂಧಿತ ಆರೋಪಿ.
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಯಳಂದೂರು ವನ್ಯಜೀವಿ ವಲಯ, ಪುರಾಣಿ ಶಾಖೆ, ಬೇತಾಳಕಟ್ಟೆಗಸ್ತಿನ ಹಾವುರಾಣಿಗುಡ್ಡ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡುಮೊಲವನ್ನು ಬೇಟೆಯಾಡಿರುವ ಆರೋಪಿತರು ವನ್ಯಜೀವಿ (ಸಂರಕ್ಷಣಾ) ಕಾಯ್ದೆ-1972ರ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು
ಬಿ.ಎಸ್ ಶ್ರೀಪತಿ ಅವರ ಮಾರ್ಗದರ್ಶನದಲ್ಲಿ
ಯಳಂದೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ಉಪವಿಭಾಗದ ಪ್ರಕಾಶ್ವರ್ ಅಕ್ಷಯ್ ಅಶೋಕ್ ಅವರ ಸೂಚನೆ ಮೇರೆಗೆ ವಲಯ ಅರಣ್ಯಾಧಿಕಾರಿ ಹೆಚ್.ಎನ್. ನಾಗೇಂದ್ರ ನಾಯಕ ಅವರ ನೇತೃತ್ವದಲ್ಲಿ ಮಧು.ಡಿ.ಕೆ ಉಪ ವಲಯ ಅರಣ್ಯಾಧಿಕಾರಿ ಪುರಾಣಿ ಶಾಖೆ, ಸಂಗಪ್ಪ ಸಿ ಗೆಣ್ಣೂರ ಪುರಾಣಿ ಗಸ್ತು. ಶ್ರೀಕಂಠ, ಕೆ. ಬೇತಾಳಕಟ್ಟೆ ಗಸ್ತು ಹಾಗೂ ಪ್ರಭುಸ್ವಾಮಿ, ಕೃಷ್ಣಯ್ಯನಕಟ್ಟೆ ಗಸ್ತು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಯಳಂದೂರು ತಾಲ್ಲೂಕಿನ ಕೃಷ್ಣಪುರ ಗ್ರಾಮದ ರಾಚಪ್ಪಾಜಿ ಕುಳ್ಳಮಾದ (24) ಹಾಗೂ ಶಿವರಾಜು.ಎನ್(37) ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಬಂಧಿತ ಆರೋಪಿಯಿಂದ ಒಂದು ನಾಡ ಬಂದೂಕು ಮತ್ತು ಅದಕ್ಕೆ ಸಂಬಂಧಿಸಿದ ಮದ್ದುಗುಂಡುಗಳು.1 ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.