ರಾಷ್ಟ್ರಪತಿಗಳು ಯುಪಿ ಸರ್ಕಾರ ವಜಾಗೊಳಿಸಬೇಕು -ಧೃವನಾರಾಯಣ್

ಮೈಸೂರು: ರಾಷ್ಟ್ರಪತಿಗಳು ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಧೃವನಾರಾಯಣ್ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಧೃವನಾರಾಯಣ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಹತ್ರಾಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಧೃವನಾರಾಯಣ್ ಹೇಳಿದರು.
ಯುವತಿಯ ಶವ ಸಂಸ್ಕಾರವನ್ನು ಪೆÇಲೀಸರೇ ಮಾಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.
ಉತ್ತರಪ್ರದೇಶ ಇಂದು ಗೂಂಡಾರಾಜ್ಯವಾಗಿ ಮಾರ್ಪಟ್ಟಿದೆ ಎಂದ ಅವರು ಘಟನೆ ಖಂಡಿಸಿ ನರೇಂದ್ರ ಮೋದಿಯವರು ವಿಷಾದ ವ್ಯಕ್ತಪಡಿಸದೇ ಒಂದು ಹೇಳಿಕೆಯನ್ನು ಸಹ ನೀಡದಿರುವುದು ದುರದೃಷ್ಟಕರ ಎಂದರು.
ಯುವತಿ ಅತ್ಯಾಚಾರ ಹಾಗೂ ಸಾವು ಕುರಿತು ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ದೃವನಾರಾಯಣ್ ಆಗ್ರಹಿಸಿದರು.