ಗಾಂಧೀಜಿಯವರ ಚಿಂತನೆಗಳಿಗೂ ಗುಂಡಿಕ್ಕುತ್ತಿರುವ ಸರ್ಕಾರಗಳು -ಎಂ.ಕೆ.ಎಸ್.

ಮೈಸೂರು: ಗಾಂಧೀಜಿಯವರ ಚಿಂತನೆಗಳಿಗೂ ಗುಂಡಿಕ್ಕುತ್ತಿರುವ ಸರ್ಕಾರಗಳು ಎಂದು ಮಾಜಿ ಶಾಸಕ ಎಂ. ಕೆ. ಸೋಮಶೇಖರ್ ಹೇಳಿದರು.
ನಗರದ ಚಾಮರಾಜ ಜೋಡಿ ರಸ್ತೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿನ ಮಹಾತ್ಮ ಗಾಂಧೀಜಿಯವರ ಪುತಳಿಗೆ ಮಾಲಾರ್ಪಣೆ ಮಾಡಿ ನಂತರ ಎಂಕೆಎಸ್. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಆಲೋಚನೆಗಳಿಗೆ ಇತಿಶ್ರೀ ಹಾಡಿ ಹಿಂಸೆ ಮೂಲಕ ದೇಶದ ವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ಪ್ರಸ್ತುತ ವಿದ್ಯಾಮಾನ ಗಮನಿಸಿದಾಗ ಮಹಾತ್ಮ ಗಾಂಧೀಜಿಯವರ ಚಿಂತನೆಗಳಿಗೂ ಗುಂಡೇಟು ತಗಲುತ್ತಿರುವುದು ಅತ್ಯಂತ ದುರದೃಷ್ಠಕರ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೈಜವಾನ್ ಜೈ ಕಿಸಾನ್, ದೇವರಾಜ ಆರಸು ರವರ ಉಳುವವನೇ ಭೂಮಿಯ ಒಡೆಯ ಎಂಬಿತ್ಯಾದಿ ರೈತಪರ ನಿಲುವುಗಳು, ಗಾಂಧೀಜಿಯವರ ರೈತಪರ ಚಳುವಳಿಗಳು ಇಂದು ಅಳಿವಿನ ಅಂಚಿನಲ್ಲಿರುವುದು ದೇಶದ ಅಧೋಗತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಗೂಂಡಾ ರಾಜ್ಯಗಳಾಗಿ ಪರಿವರ್ತಿಸುತ್ತಿರುವುದು ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಯಾಗಿವೆ ಎಂದರು.