ಲೋಕಾ ಬಲೆಗೆ ತಾಂತ್ರಿಕ ಸಹಾಯಕ

ಚಾಮರಾಜನಗರ: ನಗರದ ಲೋಕೋಪಯೋಗಿ ಬಂದರು ಮತ್ತು ಒಳಮಾಡು ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕಛೇರಿಯ ತಾಂತ್ರಿಕ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ‌.

ನಂದರಾಜ್ ಎಂಬಾತ ಲೋಕಾ ಬಲೆಗೆ ಬಿದ್ದಿದ್ದು ಕಚೇರಿ ಅದಿಕಾರಿ ನಿರ್ದೇಶನ ಮೇರೆಗೆ ಈ ಸಿಬ್ಬಂದಿ ಹಣ ಪಡೆದಿದ್ದಾನೆ ಎನ್ನಲಾಗಿದೆ.

ಗುಣಮಟ್ಟದ ಪ್ರಮಾಣ ಪತ್ರ ನೀಡಲು ೫೫೦೦ ರೂ ಬೇಡಿಕೆ ಸಲ್ಲಿಸಿ ಒಂದು ಸಾವಿರ ಮುಂಗಡ ಪಡೆದಿದ್ದು ಬಾಕಿ ೪೫೦೦ ಪಡೆಯುವಾಗ ಈತ ಸಿಕ್ಕಿಬಿದ್ದಿದ್ದಾನೆ.

ಡಿವೈ ಎಸ್ ಪಿ ಮ್ಯಾಥ್ಯೂ ಥಾಮಸ್‌‌ ಮಾರ್ಗದರ್ಶನದಲ್ಲಿ ಲೋಹಿತ್ ಅವರು ಕಾರ್ಯಚರಣೆ ನಡೆಸಿದ್ದಾರೆ.

ದಾಳಿಯಲ್ಲಿ ಇನ್ಸ್ ಪೆಕ್ಟರ್ ಗಳಾದ ಲೋಕೇಶ್ ,ಶಶಿಕುಮಾರ್, ಸಿಬ್ಬಂದಿಗಳಾದ ಗೌತಮ್,ಶಾಂತಾರಾಜು,ಶ್ರೀನಿವಾಸ್,ಗುರು ಪ್ರಸಾದ್, ಪ್ರಸಾದ್ ಮತ್ತಿತರ ಸಿಬ್ಬಂದಿ ಪಾಲ್ಗೊಂಡಿದ್ದರು.