ತೋಟದ ಮನೆಯಲ್ಲಿ ರೌಡಿ ಶೀಟರ್ ಬರ್ಭರ ಹತ್ಯೆ

ಮೈಸೂರು: ಮೈಸೂರು ತಾಲೂಕು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹನಗಳ್ಳಿಯ ತೋಟದ ಮನೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಬರ್ಭರವಾಗಿ ಹತ್ಯೆ ಮಾಡಲಾಗಿದೆ.

ದೊರೆಸ್ವಾಮಿ.ಆ.ಸೂರ್ಯ ಕೊಲೆಯಾದ ರೌಡಿ ಶೀಟರ್.

ನಿನ್ನೆ ಮಧ್ಯರಾತ್ರಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.ಮಾರಕಾಸ್ತ್ರದಿಂದ ನಾಲ್ಕಾರು ಕಡೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ದೊರೆಸ್ವಾಮಿ ವಿರುದ್ದ 4 ರಿಂದ 5 ಪ್ರಕರಣಗಳಿದ್ದ ಎಂಒಬಿ ಆಗಿದ್ದಾನೆ. 6 ತಿಂಗಳ ಹಿಂದೆ ಪತ್ನಿ ದೀಪಿಕಾ ಈತನಿಂದ ದೂರವಾಗಿದ್ದಾಳೆ.

ಬೆಂಗಳೂರಿನ ಯುವತಿಯೊಬ್ಬಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದು ಕೆಲವು ದಿನಗಳಿಂದ ಯುವತಿಯ ಜೊತೆ ಓಡಾಡಿರುವ ಮಾಹಿತಿ ಲಭ್ಯವಾಗಿದೆ.

ಕೃತ್ಯ ನಡೆದ ಹಿಂದಿನ ದಿನ ಕೂಡಾ ಯುವತಿಯ ಜೊತೆ ಇದ್ದನೆಂದು ತಿಳಿದುಬಂದಿದೆ.

ಕೃತ್ಯ ನಡೆದ ಸ್ಥಳದಲ್ಲಿ ಹೋಟೆಲ್ ನಿಂದ ತಂದ ಪದಾರ್ಥಗಳು ಪತೆಯಾಗಿವೆ,ಈಗ ಯುವತಿ ನಾಪತ್ತೆಯಾಗಿದ್ದು,ಆಕೆಯ ಪತ್ತೆಗೆ ಜಯಪುರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್,ಡಿವೈಎಸ್ಪಿ ಕರೀಂ ರಾವತರ್,ಜಯಪುರ ಠಾಣೆ ಎಸ್ಸೈ ಶಿವನಂಜಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳುಮುದ್ರೆ ಘಟಕದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.