ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಆಡಳಿತ ಕೇಂದ್ರವಾದ ಚಾಮರಾಜನಗರ ಜಿಲ್ಲಾಡಳಿತ ಭವನ ಈಗ ಕುಡುಕರ ತಾಣವಾಗುತ್ತಿದೆ ಎಂದರೆ ತಪ್ಪಾಗಲಾರದು.
ಚಾಮರಾಜನಗರ ಜಿಲ್ಲಾಡಳಿತ ಭವನದ ಹಳೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿ ಹಿಂಭಾಗ ಮದ್ಯದ ಪೌಚುಗಳು ಬಿದ್ದಿರುವುದು ಕುಡುಕರ ತಾಣವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಜಿಲ್ಲಾಡಳಿತ ಭವನ ಮೂರಂತಸ್ತಿನಲ್ಲಿ ನಿರ್ಮಾಣವಾಗಿದ್ದು ಸುಸಜ್ಜಿತವಾದ ಕಟ್ಟಡಕ್ಕೆ ಕಾವಲುಗಾರರಿದ್ದರೂ, ಸಿ.ಸಿ.ಕ್ಯಾಮರಾ ಅಳವಡಿಸಿದ್ದರೂ ಕುಡುಕರು ಎಲ್ಲರ ಯಾಮಾರಿಸಿ ಚಾಮರಾಜನಗರ ಜಿಲ್ಲಾಡಳಿತ ಭವನ ಕುಡುಕರ ಭವನದ ಕೇಂದ್ರವಾಗಿರುವುದು ಮಾತ್ರ ಸೋಜಿಗವೇ ಸರಿ.