ದರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಂ ಚನೆ: ಮಾಜಿ ಸಿಇಒ ವಿರುದ್ದ ಎಫ್ ಐ ಆರ್

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕು ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75.44 ಲಕ್ಷ ಹಣ ದುರುಪಯೋಗವಾಗಿದ್ದು,ಮಾಜಿ ಸಿಇಒ ನಾರಾಯಣ ನಾಯ್ಕ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ಹಾಲಿ ಸಿಇಒ ಬೀರಪ್ಪ ಅವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

2022-23 ರ ಅವಧಿಯಲ್ಲಿ ಹಣ ದುರುಪಯೋಗವಾಗಿರುವುದು ಲೆಕ್ಕಪರಿಶೋಧನಾ ವೇಳೆ ತಿಳಿದುಬಂದಿದೆ.

30-06-2023 ರಂದು ನಾರಾಯಣ ನಾಯ್ಕ ನಿವೃತ್ತಿ ಹೊಂದಿದ್ದಾರೆ.ಸೂಕ್ತ ಲೆಕ್ಕಗಳನ್ನ ಪಾಲಿಸದೆ ಸಂಘಕ್ಕೆ 75,44,833 ರೂ ದುರುಪಯೋಗ ಮಾಡಿಕೊಂಡು ಸಂಘಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಲಾಗಿದೆ.

ಸಾಲಗಾರರ ಲೆಡ್ಜರ್ ನಲ್ಲಿ ಹಣ ಪಾವತಿ ಆದಂತೆ ಹಾಗೂ ಮರುಪಾವತಿ ಆದಂತೆ ನಮೂದಿಸಿ ನಗದು ಪುಸ್ತಕದಲ್ಲಿ ಜಮಾ ಮಾಡದೆ ಇರುವುದು 67,95,266 ರೂ ಇದೆ.

ಸದಸ್ಯರಿಗೆ ದಾಖಲಾತಿ ಇಲ್ಲದೆ ಸಾಲ ಮುಂಗಡ ಮಾಡಿರುವುದು 4,58,000ರೂ ಇದೆ.ಜಿಲ್ಲಾ ಬ್ಯಾಂಕ್ ಷೇರು ವ್ಯತ್ಯಾಸ. 63,850 ರೂ ಇದೆ.

ಕೆಸಿಸಿ ಅಮಾನತ್ತು ಬಾಬ್ತಿಗೆ ಹೆಚ್ಚಿನ ಖರ್ಚು ತೋರಿಸಿರುವುದು 2,03,477ರೂ ಇದೆ

ಶಿಲ್ಕು ವೆತ್ಯಾಸ 24,240 ರೂಗಳಿವೆ

ಒಟ್ಟು ನಾರಾಯಣ ನಾಯ್ಕ ಅವಧಿಯಲ್ಲಿ 75,44,833 ರೂ ಹಣ ದುರುಪಯೋಗವಾಗಿದೆ.ಈ ಸಂಬಂಧ ನಾರಾಯಣ ನಾಯ್ಕ ಅವರನ್ನ ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿಲ್ಲ.ಹಾಗಾಗಿ ಕೃಷಿಪತ್ತಿನ ಸಹಕಾರ ಸಂಘಗಳ ನಿಯಮಾನುಸಾರ ನಾರಾಯಣ ನಾಯ್ಕ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ.