ಮೈಸೂರು: ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ ಪತ್ನಿಯ ಮೇಲೆ ಪತಿ ಸಾಂಬಾರ್ ಸುರಿದ ಗಾಯಗೊಳಿಸಿದ ಹೇಯ ಘಟನೆ ಮೈಸೂರಿನ ಹಿನಕಲ್ ನಲ್ಲಿ ನಡೆದಿದೆ.
ಹಿನಕಲ್ ವಾಸಿ ರಾಜು ಪತ್ನಿಯ ಮೇಲೆ ಹೀಗೆ ವಿಕೃತಿ ಮೆರೆದಿದ್ದು,ಪತ್ನಿ ಮಂಗಳಮ್ಮ ಪುತ್ರಿ ಸುಮತಿ ಗಾಯಗೊಂಡು, ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಂಜನಗೂಡು ನಿವಾಸಿಗಳಾದ ರಾಜು ಹಾಗೂ ಮಂಗಳಮ್ಮ ಜೀವನೋಪಾಯಕ್ಕಾಗಿ 4 ತಿಂಗಳ ಹಿಂದೆ ಮೈಸೂರಿಗೆ ಬಂದು ಹಿನಕಲ್ ನಲ್ಲಿ ನೆಲೆಸಿದ್ದರು.
ಆದರೆ ರಾಜು ಕುಡಿತದ ಚಟಕ್ಕೆ ಅಂಟಿಸಿಕೊಂಡು ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ,ಹಾಗಾಗಿ ಆಗಾಗ ಜಗಳವಾಗುತ್ತಿತ್ತು.
ಎರಡು ದಿನಗಳ ಹಿಂದೆ ಪತ್ನಿ ಮಂಗಳಮ್ಮ ಕೆಲಸ ಮುಗಿಸಿ ಮನೆಗೆ ಬಂದಾಗ ರಾಜು ಮನೆಯಲ್ಲೇ ಕುಡಿದು ಬಿದ್ದಿದ್ದ.ಇದರಿಂದ ಕೋಪಗೊಂಡ ಆಕೆ, ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಸಂಸಾರ ಹೇಗೆ ನಡೆಯುತ್ತೆ.ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದು ರಾಜುಗೆ ಬುದ್ದಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ರಾಜು ನನ್ನ ಸಂಪಾದನೆಯಲ್ಲಿ ನಾನು ಕುಡೀತೀನಿ. ನೀನು ಇದ್ದರೇ ತಾನೆ ಕೆಲಸಕ್ಕೆ ಹೋಗು ಅಂತೀಯಾ ಎಂದು ಒಲೆ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬಾರ್ ಎತ್ತಿ ಮಂಗಳಮ್ಮನ ಮೇಲೆ ಸುರಿದಿದ್ದಾನೆ .ಈ ವೇಳೆ ಮಗಳು ಸುಮತಿ ಸಹ ಇದ್ದು.ಇಬ್ಬರಿಗೂ ಸುಟ್ಟಗಾಯಗಳಾಗಿವೆ. ಇಬ್ಬರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.