ಮೈಸೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ 17 ಜನ ಶಾಸಕರು, ಸಚಿವರ ಹನಿಟ್ರ್ಯಾಪ್ ವಿಡಿಯೋ ಇದೆ ಎಂದು ಎಂ ಎಲ್ ಸಿ ಡಾ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಆಗದಂತೆ ಕೋರ್ಟ್ ನಿಂದ ಇನ್ಜೆಕ್ಷನ್ ಆರ್ಡರ್ ತಂದಿದ್ದಾರೆ,ಆಗ ಬಿಜೆಪಿ ಅವರೇ ಈ ರೀತಿ ಹನಿ ಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ರಾಜಣ್ಣ ಅವರು ಇಂತಹ ಪಕ್ಷದವರೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ,ರಾಜಣ್ಣ ದೂರು ಕೊಟ್ಟರೇ ತನಿಖೆ ಮಾಡಿಸಿ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದರು.
ಸರ್ಕಾರ ಬೀಳಿಸಲು ಹನಿಟ್ರ್ಯಾಪ್ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ,
ಹಿಂದೆ ಬಿಜೆಪಿ ಸರ್ಕಾರದಲ್ಲೂ ಹನಿಟ್ರ್ಯಾಪ್ ನಡೆದಿದೆ,ಈಗಲೂ ಇಂತಹ ಪ್ರಯತ್ನ ನಡೆದಿದೆ,ಇದರ ಹಿಂದೆ ದೊಡ್ಡ ಜಾಲವೆ ಇದೆ,
ತನಿಖೆಯ ಮೂಲಕವೇ ಜಾಲವನ್ನ ಪುತ್ತೆ ಹಚ್ಚಬೇಕಿದೆ ಎಂದು ತಿಳಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು, ರಾಜಕಾರಣಿಗಳಿಗೆ ಎಷ್ಟೋ ಜನರು ಫೋನ್ ಮಾಡ್ತಾರೆ,ನನಗೂ ಇಡೀ ರಾಜ್ಯದಿಂದ ಎಷ್ಟೋ ಜನರು ಫೋನ್ ಮಾಡ್ತಾರೆ,
ಕೆಲವೊಂದು ಭಾರಿ ಯಾರು ಅಂತ ಗೊತ್ತಿಲ್ಲದಿದ್ದರೂ ಫೋನ್ ತೆಗೆಯುತ್ತೇನೆ,
ತಂತ್ರಜ್ಞಾನವನ್ನ ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ ವಿಡಿಯೋ ಕಾಲ್ ಆನ್ ಮಾಡಿದ ತಕ್ಷಣ ಎಐ ಮೂಲಕ ತಪ್ಪು ವಿಡಿಯೋ ಕಳುಹಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲೆ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು,
ಹಣ ಹಾಗೂ ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ಹನಿ ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ಯತೀಂದ್ರ ಕಿಡಿಕಾರಿದರು.
ರಾಜಣ್ಣ ಯಾರ ಮೇಲೂ ಆರೋಪ ಮಾಡಿಲ್ಲ,ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕು,ಇವರೇ ಮಾಡಿದ್ದಾರೆಂದು ಬಿಜೆಪಿಯವರು ಯಾಕೆ ಊಹೇ ಮಾಡಬೇಕು,ತಮ್ಮ ಪಕ್ಷದವರದ್ದೇ ಸಿಡಿ ಮಾಡಿ ಇಟ್ಟುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಟಾಂಗ್ ನೀಡಿದರು.
ನಮ್ಮ ಹೈ ಕಮಾಂಡ್ ಗೆ ಹನಿ ಟ್ರ್ಯಾಪ್ ವಿಚಾರ ಖಂಡಿತವಾಗಿ ತಿಳಿದಿದೆ.
ಸಿಎಂ ಹಾಗೂ ನಮ್ಮ ಪಕ್ಷದ ಮುಖಂಡರು ಹೈ ಕಮಾಂಡ್ ಗೆ ಈ ವಿಚಾರವನ್ನ ತಿಳಿಸುತ್ತಾರೆ.
ಕೇಂದ್ರದ ನಾಯಕರಿಗೆ ನಮ್ಮ ನಾಯಕರು ದೂರು ಕೊಟ್ಟಿರುವ ಬಗ್ಗೆ ಗೊತ್ತಿಲ್ಲ ಎಂದು
ಪ್ರಶ್ನೆಯೊಂದಕ್ಕೆ ಯತೀಂದ್ರ ಸಿದ್ದರಾಮಯ್ಯ ಉತ್ತರಿಸಿದರು.ಹನಿಟ್ರ್ಯಾಪ್ ಡಿ.ಕೆ ಶಿವಕುಮಾರ್ ಮಾಡಿಸಿದ್ದಾರೆ ಎಂಬ ಆರೋಪ ಇದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ,ಡಿ.ಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ ಯತೀಂದ್ರ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಪಾತ್ರ ಇದರಲ್ಲಿ ಇಲ್ಲ,ನಮ್ಮ ಪಕ್ಷದವರು ಇಂತಹವರೇ ಮಾಡಿಸಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಡಿ.ಕೆ ಶಿವಕುಮಾರ್ ಹೆಸರನ್ನ ಯಾರು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.