ಮೈಸೂರು: ಮಗಳ ಸಮಾನಳಾದ ಬಾಲಕಿ ಮೇಲೆ ನೀಚ ಚಿಕ್ಕಪ್ಪ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಅತ್ಯಂತ ಹೇಯ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಶಾಲೆಗೆ ತೆರಳಿದ್ದ ಬಾಲಕಿಯನ್ನ ಮನೆಗೆ ಕರೆತಂದ ಚಿಕ್ಕಪ್ಪ ಅತ್ಯಾಚಾರವೆಸಗಿದ್ದಾನೆ ಈ ಬಗ್ಗೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ ಚಿಕ್ಕಪ್ಪ ಈಗ ಜೈಲು ಪಾಲಾಗಿದ್ದಾನೆ.
ಕಳೆದ ಎರಡು ತಿಂಗಳಿಂದ ಬಾಲಕಿ ಪೀರಿಯೆಡ್ಸ್ ಆಗಿಲ್ಲವೆಂಬ ಕಾರಣಕ್ಕೆ ಮನೆಯವರು ವೈದ್ಯರಲ್ಲಿ ಕರೆ ತಂದಿದ್ದಾರೆ. ವೈದ್ಯರು ಪರಿಶೀಲಿಸಿದಾಗ ಆಕೆ ಗರ್ಭಿಣಿ ಯಾಗಿರುವುದು ಗೊತ್ತಾಗಿದೆ.
ಬಾಲಕಿಯನ್ನ ಪುಸಲಾಯಿಸಿ ಶಾಲೆಯಿಂದ ಮನೆಗೆ ಕರೆತಂದಿದ್ದ ಕಾಮುಕ ಚಿಕ್ಕಪ್ಪ ನಂತರ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ಹೇಳಿ ಅಮಾಯಕನಂತೆ ಮತ್ತೆ ಶಾಲೆಗೆ ಬಿಟ್ಟಿದ್ದಾನೆ.
ಪೀರಿಯೆಡ್ಸ್ ನಲ್ಲಿ ವ್ಯತ್ಯಾಸ ಕಂಡು ಬಂದು ವೈದ್ಯರ ಬಳಿ ತೆರಳಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ವಿಷು ಗೊತ್ತಾಗುತ್ತಿದ್ದಂತೆ ಇತ್ತೀಚೆಗೆ ಯಾರನ್ನ ನಂಬುವುದು,ಯಾರನ್ನ ಬಿಡುವುದು ಇಂತಹ ಹೊಲಸು ಕೆಲಸವನ್ನ ಮನೆಯವರೇ ಮಾಡಿದರೆ ಹೆಣ್ಣು ಹೆತ್ತವರ ಪಾಡೇನು,ಇಂತಹ ನೀಚರೂ ಇದ್ದಾರಲ್ಲಾ ಎಂದು ರೋಸಿಹೋದ ಜನ ಶಾಪ ಹಾಕುತ್ತಿದ್ದಾರೆ.
ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಬಾಲಕಿಯನ್ನ ವಶಕ್ಕೆ ಪಡೆದಿದ್ದಾರೆ. ನಂಜುಂಡಸ್ವಾಮಿ ವಿರುದ್ದ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆಯುತ್ತಿರು ವುದರಿಂದ ಸಂತ್ರಸ್ತ ಬಾಲಕಿಯನ್ನ ಬಾಲಮಂದಿರ ದಿಂದ ಪರೀಕ್ಷಾ ಕೇಂದ್ರಕ್ಕೆ ಪೊಲೀಸರ ಭದ್ರತೆಯಲ್ಲಿ ಕರೆತರಲಾಗುತ್ತಿದೆ.