ಮೈಸೂರು: ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ.ಯ ೭ ನೇ ಘಟಿಕೋತ್ಸವದಲ್ಲಿ ಮಾಸ್ಟರ್ಸ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಪ್ರಥಮ ರ್‍ಯಾಂಕ್ ಪಡೆದ ಬಿ.ಎಲ್ ಗಾನವಿ ಅರಸ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಗಾನವಿ ಅರಸ್ ಅವರು ಮೈಸೂರಿನ ಗೋಕುಲಮ್ ನಿವಾಸಿಗಳಾದ ಲೋಕೇಶ್ ರಾಜ್ ಅರಸ್ ಮತ್ತು ಬಿ.ವಿ.ಚೇತನಾ ದಂಪತಿಗಳ ಪುತ್ರಿ.
ಗಾನವಿ ಅವರಿಗೆ ಇತ್ತೀಚೆಗೆ ನಡೆದ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ.ಯ ೭ ನೇ ಘಟಿಕೋತ್ಸವದಲ್ಲಿ ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಚಿನ್ನದ ಪದಕ ಪ್ರದಾನ ಮಾಡಿ ಶುಭ ಕೋರಿದರು.
ಗಾನವಿ ಅವರ ಈ ಸಾಧನೆಗೆ ಅವರ ಕುಟುಂಬ ವರ್ಗದವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.