ಮೈಸೂರು: ನಗರದ ಹಿನಕಲ್ ಬಳಿ ರಿಂಗ್‌ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮಗು ಮೃತಪಟ್ಟಿದೆ.
ಬೆಂಗಳೂರಿನ ನರೇಶ್ ಎಂಬುವರ ಕಾರು ಉರುಳಿ ಅವರ ಪುತ್ರಿ ಮೈಥಿಲಿ (2) ಎಂಬ ಮಗು ಮೃತಪಟ್ಟಿದೆ.
ಉಡುಪಿಯ ನರೇಶ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಯುಗಾದಿ ರಜೆ ಕಾರಣ ಕುಟುಂಬದೊಂದಿಗೆ ಕೇರಳದ ವಯನಾಡ್ ಪ್ರವಾಸಕ್ಕೆ ಹೋಗಿ, ಪ್ರವಾಸ ಮುಗಿಸಿ ಸೋಮವಾರ ಸಂಜೆ ಬೆಂಗಳೂರಿಗೆ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ.
ಮೈಸೂರಿನ ಹೊರ ವರ್ತುಲ ರಸ್ತೆ, ವಿಜಯನಗರ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿದ್ದ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಈ ವೇಳೆ ಕಾರಿನಲ್ಲಿ ನರೇಶ್ ಅವರೊಂದಿಗೆ ಪತ್ನಿ ಸಂಧ್ಯಾ, ಸಂದೇಶ್, ಲಿಖಿತಾ, ಮನೋರಮಾ ಹಾಗೂ ಮಗು ಮೈಥಿಲಿ ಇದ್ದರು ಕಾರಲ್ಲಿದ್ದವರಿಗೆ ಗಾಯ ವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ,ಮೈಥಿಲಿ ಮೃತಪಟ್ಟಿದ್ದಾಳೆ
ಅಪಘಾತ ಸಂಬಂದ ವಿ.ವಿ.ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.