ಮೈಸೂರು: ಮೈಸೂರು ಕನ್ನಡ ವೇದಿಕೆ ವತಿಯಿಂದ ಪತ್ರಕರ್ತರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಉದ್ಘಾಟಿಸಿದರು.
ಮಹಾರಾಣಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಸುಧಾ ಅವರು ಪ್ರಧಾನ ಭಾಷಣ ಮಾಡಿದರು.
ದಂತ ವೈದ್ಯರಾದ ಡಾ॥ ಲೋಕೇಶ್, ಮೈಸೂರು ಕನ್ನಡ ವೇದಿಕೆಯ ಎಸ್. ಬಾಲಕೃಷ್ಣರ ಉಪಸ್ಥಿತರಿದ್ದರು.
ರಾಜಶ್ರೀ ರಾಹುಲ್- ಸಮಾಜ ಸೇವಕರು, ಆರ್. ಪಾರ್ವತಿ- ಪೌರಕಾರ್ಮಿಕರು, ಎಸ್. ರಮ್ಯ- ಉಪ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಪವಿತ್ರರಾಜು- ಇಂಡಿಯನ್ ಟಿವಿ ವರದಿಗಾರ್ತಿ, ಅಂಬಿಕಾ ವೆಂಕಟೇಶ್- ಸೌಂದರ್ಯ ತಜ್ಞೆ, ಬಿ. ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್, ಶುಶ್ರೂಷಕಿ, ಎನ್. ಸರಸ್ವತಿ- ಶ್ರೀರಂಗಪಟ್ಟಣ ನಗರ ಘಟಕ ಕಸಾಪ ಅಧ್ಯಕ್ಷರು, ಗೀತ ಎಂ.ಬಿ-ಮಹಿಳಾ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಪ್ರೇಮ ಕಲಾವಿದರು ಹಾಗೂ ತೇಜಸ್ವಿನಿ ಗಣಕಯಂತ್ರ ಆಪರೇಟರ್,ಇವರುಗಳಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.