ಮೈಸೂರು, ಅ. 4- ದಸರೆ ಹಾಗೂ ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಗರದ ರಾಮ್‍ಸನ್ಸ್ ಕಲಾ ಪ್ರತಿಷ್ಠಾನವು ಬೊಂಬೆ ಮನೆ’ ಬೊಂಬೆಗಳ ಪ್ರದರ್ಶನವನ್ನು ಆಯೋಜಿಸಿದೆ. ಕಳೆದ 16 ವರ್ಷಗಳಿಂದ ಈ
ಬೊಂಬೆ ಮನೆ’ ಪ್ರದರ್ಶನದ 16ನೇ ಅವತರಣಿಕೆಯು ಹೆಸರಾಂತ ಭರತನಾಟ್ಯ ಕಲಾವಿದ ದಂಪತಿ ಡಾ. ಅಂಜನಾ ಭೂಷಣ್ ಮತ್ತು ಬದರೀ ದಿವ್ಯ ಭೂಷಣ್ ಅವರು ಉದ್ಘಾಟಿಸಿದರು. ಇದರೊಂದಿಗೆ 3 ವಿಶೇಷ ಅಂಕಣಗಳನ್ನೂ ಸಹ ಅನಾವರಣಗೊಳಿಸಿದರು.
ಪ್ರತಿ ಬೊಂಬೆ ಮನೆ ಪ್ರದರ್ಶನದಲ್ಲಿ ವಿಶಿಷ್ಟ ಬೊಂಬೆಗಳ ಅಂಕಣಗಳನ್ನು ರಾಮ್‍ಸನ್ಸ್ ಕಲಾ ಪ್ರತಿಷ್ಠಾನವು ಆಯೋಜಿಸಿದ್ದು ಒಂದು ಸಂಪ್ರದಾಯದಂತೆ ಬೆಳೆದು ಬಂದಿದೆ.
ಮೈಸೂರಿನ ಸಂಸ್ಕøತಿ ವಿಶೇಷ, ದೇವಿ ಆರಾಧನೆಯ ವೈವಿಧ್ಯ, ವಿವಿಧ ಪ್ರಾಂತ್ಯಗಳ ಬೊಂಬೆ ಸಂಪ್ರದಾಯ – ಹೀಗೆ ಬೇರೆ ಬೇರೆ ವೈಖರಿಯ, ಸುಂದರ ಬೊಂಬೆಗಳ ದೃಶ್ಯಾವಳಿಯೇ ಈ ವಿಶೇಷ ಅಂಕಣಗಳು.
ರಾಮಾಯಣದ ಅಸಂಖ್ಯ ದೃಶ್ಯಾವಳಿಗಳು ಮನೆಮನೆಗಳನ್ನು ಅಲಂಕರಿಸಿವೆ. ಈ ವೈವಿಧ್ಯಮಯ ವರ್ಣರಂಜಿತ ಪಟಗಳ ಜೊತೆಗೆ ಬೊಂಬೆ ರಾಮಾಯಣದ ಅಂಕಣ ರಾಮ ಕಲಾ ಕಲ್ಪ’ ಮನೋಹರವಾಗಿದೆ. ಈ ವರ್ಷ ಕರ್ನಾಟಕದ ವಿವಿಧ ಪ್ರಾಂತ್ಯಗಳಲ್ಲಿ ಪೂಜಿಸಲ್ಪಡುವ ದೇವಿ ಗೌರಿಯ ನಾನಾ ರೂಪ, ಅಲಂಕಾರಗಳು, ಪೂಜಾ ವೈವಿಧ್ಯಗಳು, ಆಚಾರ, ಉಡುಗೆ, ತೊಡುಗೆ, ಹೆಸರು, ನೀತಿ, ನಿಯಮಗಳು - ಹೀಗೆ ಸಂಪ್ರದಾಯವನ್ನು ಬೊಂಬೆಗಳ ಮೂಲಕ ತೋರಿಸಲು ಯತ್ನಿಸಲಾಗಿದೆ. ಇದೇ
ಗೌರಿ ಸೆಜ್ಜೆ’.
ಮೈಸೂರು ಮಹಾರಾಜರಿಗೆ ನಲ್ಮೆಯ ನೆನಕೆಯಾಗಿ ಬೊಂಬೆ ಮನೆಯ ಮಗದೊಂದು ವಿಶೇಷ ಅಂಕಣ ತಯಾರಾಗಿದೆ.
ಇದರೊಟ್ಟಿಗೆ 12 ರಾಜ್ಯಗಳಿಂದ ಸುಮಾರು 5 ಸಾವಿರ ಬೊಂಬೆಗಳನ್ನು ತರಿಸಲಾಗಿದೆ.
ಮಣ್ಣು, ಕಾಗದ ರಚ್ಚು, ಪ್ಲಾಸ್ಟರ್, ಮರ, ಗಾಜು, ಪಿಂಗಾಣಿ ಮತ್ತು ಲೋಹದಿಂದ ಮಾಡಿರುವ ಬೊಂಬೆಗಳ ಸಾಮ್ರಾಜ್ಯ ಅಣಿಯಾಗಿದೆ.