ಮೈಸೂರು: ಮಹಿಳಾ ಸಿಸಿಎಲ್ ಖಾತೆಯಿಂದ ಅಕ್ರಮವಾಗಿ 1.41 ಕೋಟಿ ಹಣವನ್ನ ಅನುಮತಿ ಇಲ್ಲದೆ ಅಕ್ರಮವಾಗಿ ವರ್ಗಾವಣೆ ಮಾಡಿದ ಕಾರಣ ಕೋ ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೂಟಗಳ್ಳಿಯಲ್ಲಿರುವ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಪ್ರಕರಣ ನಡೆದಿದೆ.ವಂಚನೆಗೆ ಒಳಗಾದ ಸುನಿತ ಎಂಬುವರು ಮ್ಯಾನೇಜರ್ ಶಿವಕುಮಾರ್,ಜನರಲ್ ಮ್ಯಾನೇಜರ್ ಸುರೇಶ್ ಹಾಗೂ ಅಧ್ಯಕ್ಷ ಬಸಂತ್ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಸುನಿತಾ ಮಹಿಳಾ ಮಂಡಳಿ ಅಧ್ಯಕ್ಷರಾದ ಸುನಿತಾ ಅವರು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಸಿಸಿಎಲ್ ಖಾತೆ ಹೊಂದಿದ್ದಾರೆ.ಈ ಹಿಂದೆ ಸಾಲಕ್ಕಾಗಿ ಕೆಲವು ಚೆಕ್ ಗಳನ್ನ ನೀಡಿದ್ದರು.ಚೆಕ್ ಗಳನ್ನ ಬಳಸಿಕೊಂಡು ಸಿಸಿಎಲ್ ಖಾತೆಯಿಂದ ಸುನಿತಾ ಅವರ ಉಳಿತಾಯ ಖಾತೆಗೆ 1,41,50,000 ರೂ ಹಣವನ್ನ ಯಾವುದೇ ಅನುಮತಿ ಪಡೆಯದೆ ವರ್ಗಾವಣೆ ಮಾಡಿದ್ದಾರೆ.
ನಂತರ ಉಳಿತಾಯ ಖಾತೆಯಿಂದ ಎರಡು ಖಾತೆಗಳಿಗೆ ತಲಾ 1,25,00,000 ಹಾಗೂ 16,00,000 ಲಕ್ಷ ವರ್ಗಾವಣೆ ಮಾಡಿ ನಂಬಿಕೆ ದ್ರೋಹ ಮಾಡಿದ್ದಾರೆಂದು ಸುನಿತಾ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ಇವೆಲ್ಲಾ ವಹಿವಾಟುಗಳು ನಡೆದಾಗ ಸಂದೇಶಗಳನ್ನ ಮೊಬೈಲ್ ಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ಆಕೆ ತಿಳಿಸಿದ್ದಾರೆ.