ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ನಂಜನಗೂಡು: ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಧಿಢೀರ್ ದಾಳಿ ನಡೆಸಿದರು.

ನಂಜನಗೂಡು ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟರ್ ಕಚೇರಿ ಮೇಲೆ ದಾಳಿ ನಡೆದಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಯ ಕಡತ ವಿಲೇವಾರಿ ಕೊಠಡಿಗಳಿಗೆ ಬೀಗ ಹಾಕಿದ ಅಧಿಕಾರಿಗಳು ನಂತರ ಪರಿಶೀಲನೆ ನಡೆಸಿದರು.

ಅಲ್ಲದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆದರು.

ಮೈಸೂರು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಕೆ ರಾಜೇಶ್ ನೇತೃತ್ವದಲ್ಲಿ ಈ ದಿಢೀರ್ ಕಾರ್ಯ ಚರಣೆ ನಡೆದಿದೆ.ಇದರಿಂದಾಗಿ ನೋಂದಣಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಇತರೆ ಅಧಿಕಾರಿಗಳು ತಬ್ಬಿಬ್ಬಾದರು.

ಸಬ್ ರಿಜಿಸ್ಟರ್ ಕಚೇರಿಯ ವಿವೇಕ್ ಎಂಬುವರನ್ನು ವಿಚಾರಣೆ ಮಾಡುತ್ತಿದ್ದಾರೆ.
ಕಳೆದ 15 ದಿನಗಳ ಹಿಂದೆ ಕಾವೇರಿ ನೀರಾವರಿ ನಿಗಮ ಇಲಾಖೆಗೆ ದಾಳಿ ಮಾಡಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಇದರ ಬೆನ್ನಲ್ಲೇ ಇಂದು
ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೂ ದಾಳಿ ಅಧಿಕಾರಿ ವರ್ಗದಲ್ಲಿ ನಡುಕ‌ ಹುಟ್ಟುವಂತೆ ಮಾಡಿದೆ ಲೋಕಾಯುಕ್ತ.