ಮೈಸೂರು: ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ವತಿಯಿಂದ ನಗರದ ನ್ಯಾಯಾಲಯದ ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಸ್ಕ್ ಹಾಕುವ ಮೂಲಕ ‘ಮಾಸ್ಕ್ ಹಾಕೋಣ ಕೊರೊನಾ ನಿಯಂತ್ರಿಸೋಣ’ ನಾಗರೀಕರಲ್ಲಿ ಕೊರೊನಾ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ, ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಿಸಲು ಲಾಕ್ ಡೌನ್, ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರದಂತಹ ಕ್ರಮ ತೆಗೆದುಕೊಂಡರು ಸಹ ನಾಗರೀಕರು ಪೂರ್ಣಪ್ರಮಾಣದಲ್ಲಿ ಪರಿಪಾಲಿಸದ ಕಾರಣ ಕೊರೊನಾ ಸೊಂಕು ದಿನೇದಿನೇ ಹೆಚ್ಚುತ್ತಿದೆ ಎಂದರು.
ಹಾಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಂದೇಶ ತತ್ವಗಳು ನಮ್ಮ ದೇಶಕ್ಕೆ ಮಾದರಿಯಾಗಿದ್ದು ನಾವೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪಾಲಿಸೋಣ ಎಂದು ತಿಳಿಸಿದರು.
ನಾಡಹಬ್ಬ ದಸರಾ ಆಹ್ವಾನ ಮಾಹಿತಿ ಹೋರ್ಡಿಂಗ್ ಬೋರ್ಡ್ ಸೇರಿದಂತೆ ಸರ್ಕಾರಿ ಯೋಜನೆ ಕಾರ್ಯಕ್ರಮಗಳ ಪ್ರಕಟಣೆಗಳಲ್ಲಿ ಮಂತ್ರಿಗಳು ಮತ್ತು ಜನಪ್ರತಿನಿಧಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರುವ ಪೆÇೀಟೋಗಳು ಸರ್ಕಾರ ಪ್ರಕಟಿಸಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ನವೀನ್ ಕೆಂಪಿ, ಸುಚೀಂದ್ರ, ಚಕ್ರಪಾಣಿ ಇದ್ದರು.