ಮೊಬೈಲ್ ಹಾಗೂ ದ್ವಿಚಕ್ರವಾಹನ ಕಳ್ಳತನ ಬಂಧನ

ಮೈಸೂರು, ಅ. 6- ಮೊಬೈಲ್ ಮತ್ತು ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಗರದ ಅಶೋಕಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಹುಣಸೂರು ಪಟ್ಟಣದ ಪ್ರಸನ್ನ (24) ಬಂಧಿತ ಆರೋಪಿ.
ಬಂಧಿತನಿಂದ 3.7ಲಕ್ಷ ರೂ. ಮೌಲ್ಯದ ಮೂರು ಹೋಂಡಾ ಆ್ಯಕ್ಟಿವಾ ದ್ವಿಚಕ್ರವಾಹನ ಹಾಗೂ ವಿವಿಧ ಕಂಪನಿಯ 10 ಮೊಬೈಲ್ ಫೆÇೀನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಜಯನಗರ ರೈಲ್ವೆ ಅಂಟರ್ ಬ್ರಿಡ್ಜ್ ಬಳಿ ಮಾಸ್ಕ್ ಧರಿಸದೇ ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ನಲ್ಲಿ ಬರುತ್ತಿದ್ದ.
ಗಸ್ತಿನಲ್ಲಿದ್ದ ಪೊಲೀಸರು ಸ್ಕೂಟರ್ ನಿಲ್ಲಿಸುವಂತೆ ಸೂಚಿಸಿದಾಗ ಆತ ತಿರುವು ಪಡೆದುಕೊಂಡು ವೇಗವಾಗಿ ಹೊರಟಾಗ ಪೊಲೀಸರು ಆತನನ್ನು ಹಿಂಬಾಲಿಸಿ ಹೋಗಿ ಹಿಡಿದು ವಿಚಾರ ಮಾಡಿದಾಗ ವಾಹನ ಕಳವು ಮಾಡಿರುವುದು ಗೊತ್ತಾಗಿದೆ.
ಅಶೋಕಪುರಂ, ಸರಸ್ವತಿಪುರಂ ಹಾಗೂ ಕೃಷ್ಣರಾಜ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರವಾಹನ ಕಳವು ಮಾಡಿದ್ದಾಗಿ ಹಾಗೂ ಅಶೋಕಪುರಂ ಶ್ರೀರಾಮಪುರಂ, ಅರವಿಂದ ನಗರ, ಕೆ.ಜಿ.ಕೊಪ್ಪಲು ಮತ್ತು ಕುವೆಂಪುನಗರದ ಮನೆಗಳಲ್ಲಿ ಕಿಟಕಿ ಮೂಲಕ ರಾತ್ರಿ ವೇಳೆ ಮೊಬೈಲ್ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಅಶೋಕಪುರಂ ಪೆÇಲೀಸ್ ಠಾಣೆ ಇನ್ಸಪೆಕ್ಟರ್ ಬಿ.ಎಸ್.ಪ್ರಕಾಶ್ ಹಾಗೂ ಸಿಬ್ಬಂದಿ ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.