ಬೆಳಗಾವಿ: ಸುರೇಶ ಅಂಗಡಿ ಅವರ ಸ್ಮಾರಕ ನಿರ್ಮಿಸಲು ಯೋಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಕೊರೊನಾ ಸೋಂಕಿನಿಂದ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿವಾಸಕ್ಕೆ ಯಡಿಯೂರಪ್ಪ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದೆಹಲಿಯಲ್ಲಿನ ಸುರೇಶ ಅಂಗಡಿ ಅವರ ಸಮಾಧಿ ನಿರ್ಮಾಣ ಹಾಗೂ ಅಭಿವೃದ್ಧಿಗೆ ರಾಜ್ಯ ಸರಕಾರ ಚಿಂತಿಸಿದೆ ಎಂದವರು ತಿಳಿಸಿದರು.
ಸುರೇಶ ಅಂಗಡಿ ಅವರು ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಆಗಿದ್ದರು ಎಂದು ಸಿಎಂ ಹೇಳಿದರು.
ಒಂದೇ ವರ್ಷದಲ್ಲಿ ರಾಜ್ಯಕ್ಕೆ ಬೇಕಾದ ಎಲ್ಲ ರೈಲ್ವೇ ಕೆಲಸಗಳನ್ನು ನಮಗೆಲ್ಲ ತೃಪ್ತಿದಾಯಕವಾಗಿ ಅವರು ಮಾಡಿದ್ದರು. ಜಾಫರ್ ಷರೀಪ್ ನಂತರ ಅವರಿಗಿಂತ ಹೆಚ್ಚಿನ ಚಟುವಟಿಕೆಯ ರೈಲ್ವೇ ಮಂತ್ರಿಯಾಗಿದ್ದವರು ಸುರೇಶ ಅಂಗಡಿ ಎಂದು ಮುಖ್ಯಮಂತ್ರಿಗಳು ಹೇಳಿದರು.