ದಂಡದ ಪ್ರಶ್ನೆಯಲ್ಲ; ಇದು ಜೀವದ ಪ್ರಶ್ನೆ -ಸಚಿವ ಕೆ.ಎಸ್. ಈಶ್ವರಪ್ಪ

ಯಾದಗಿರಿ: ದಂಡದ ಪ್ರಶ್ನೆಯಲ್ಲ; ಇದು ಜೀವದ ಪ್ರಶ್ನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಈಶ್ವರಪ್ಪನವರು ಬುಧವಾರ ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದಂಡದ ಪ್ರಶ್ನೆಯಲ್ಲ, ಇದು ಜೀವದ ಪ್ರಶ್ನೆ ಆಗಿದೆ. ಒಬ್ಬರಿಗೆ ಕೊರೊನಾ ಅಂಟಿದರೆ ಇಡೀ ಕುಟುಂಬಕ್ಕೆ ವ್ಯಾಪಿಸುತ್ತೆ. ಆಸ್ಪತ್ರೆ ಸೇರಿದರೆ ಲಕ್ಷಗಟ್ಟಲೆ ಖರ್ಚಾಗುತ್ತೆ. ಹಾಗಾಗಿ ಜಾಗೃತಿ ಮೂಡಿಸಲು ದಂಡ ವಿಧಿಸಲಾಗುತ್ತಿದೆ ಎಂದರು.
ದಂಡ ಬೀಳದಿರುವ ಹಾಗೆ ಜನ ಮಾಸ್ಕ್ ಹಾಕಿದರೆ ಆಯ್ತು ಎಂದು ಜನತೆಗೆ ಈಶ್ವರಪ್ಪ ಕಿವಿ ಮಾತು ಹೇಳಿದರು.
ಬಡವರ ಬಳಿ ಹಣ ಕೀಳಬೇಕೆಂದು ದಂಡ ವಿಧಿಸುತ್ತಿಲ್ಲ ಎಂದ ಅವರು ಮಾಸ್ಕ್ ವಿಚಾರವಾಗಿ ಕೆಲವರು ರಾಜಕಾರಣ ಮಾಡಲು ಹೊರಟಿದ್ದಾರೆ ಇದು ಒಳ್ಳೆಯದಲ್ಲ ಎಂದರು.
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನವರು ಕುಸುಮಾ ಅವರನ್ನ ನಿಲ್ಲಿಸಿದ್ದು ಸರಿ ತಪ್ಪು ಅನ್ನೋದನ್ನ ಜನ ನಿರ್ಧರಿಸುತ್ತಾರೆಂದು ಈಶ್ವರಪ್ಪ ಮಾರ್ಮಿಕವಾಗಿ ಹೇಳಿದರು.
ಅವರ ಗಂಡನ ಕೊಲೆ ವಿಚಾರವನ್ನೂ ಜನ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ತಾರೆಂದರು.
ಮುನಿರತ್ನ ಅವರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಕ್ಕೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಹುತೇಕರಿಗೆ ಸ್ಥಾನ ಸಿಕ್ಕಿದೆ, ಮುನಿರತ್ನ ಅವರಿಗೂ ಸ್ಥಾನ ಸಿಗಲಿದೆ ಎಂದು ಈಶ್ವರಪ್ಪ ತಿಳಿಸಿದರು.