ಮಹಿಳೆ ಕೊಲೆ: ಇಬ್ಬರ ಬಂಧನ

ಮೈಸೂರು, ಅ. 8- ಮಹಿಳೆಯೊಬ್ಬರ ಕೊಲೆ ಪ್ರಕರಣಜ ಆರೋಪಿಗಳನ್ನು ಬಂಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಮಾರಸ್ವಾಮಿ (20), ನಾಗೇಂದ್ರ (20) ಬಂಧಿತ ಆರೋಪಿಗಳು.
ಬನ್ನೂರು ಠಾಣಾ ವ್ಯಾಪ್ತಿಯ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಆರೋಪಿಗಳನ್ನು ಬನ್ನೂರು ಪೆÇೀಲಿಸರು ಬಂಧಿಸಿದ್ದಾರೆ.
ನುಗ್ಗಹಳ್ಳಿ ಕೊಪ್ಪಲು ಹೊರವಲಯದ ತೋಪಿನಲ್ಲಿ ಅದೇ ಗ್ರಾಮದ ಮಹದೇವಿ (50) ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಅವರ ಕಿವಿ ಓಲೆ, ಮಾಂಗಲ್ಯ ಕರಿಮಣಿ ಸರವನ್ನು ಕಸಿದುಕೊಂಡು ಹೋಗಿರುವ ಬಗ್ಗೆ ಬನ್ನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಅಡಿಷನಲ್ ಎಸ್ಪಿ ಆರ್. ಶಿವಕುಮಾರ್ ಹಾಗೂ ನಂಜನಗೂಡು ಉಪವಿಭಾಗದ ಪ್ರಭಾಕರ್ ರಾವ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಟಿ. ನರಸೀಪುರ ಸಿಪಿಐ ಎಂ. ಆರ್. ಲವ ಮತ್ತು ಪಿಎಸ್ ಐ ಪುನೀತ್ ಬಿಎನ್ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.
ಈ ತಂಡ ಕೊಲೆ ಪ್ರಕರಣದ ಆರೋಪಿಗಳಾದ ಕುಮಾರಸ್ವಾಮಿ (20), ನಾಗೇಂದ್ರ (20)ರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರಿಂದ ಪೊಲೀಸರು ಮೃತ ಮಹದೇವಿ ಅವರ ಕಿವಿ ಓಲೆ, ಕರಿ ಮಣಿಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹದೇವಿ ಅವರು ಎಮ್ಮೆಗಳನ್ನು ಮೇಯಿಸಲು ತೋಪಿನ ಹತ್ತಿರ ಒಬ್ಬಂಟಿಯಾಗಿ ಬರುವುದನ್ನು ಆರೋಪಿಗಳು ಗಮನಿಸಿ 3-4 ದಿನಗಳಿಂದ ಹೊಂಚು ಹಾಕಿ ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ದರೋಡೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಸಿಪಿಐ ಎಂ. ಆರ್. ಲವ, ಪಿಎಸ್‍ಐ ಬಿಎನ್. ಪುನೀತ್, ಹೆಡ್ ಕಾನ್ ಸ್ಟೇಬಲ್ ಗಳಾದ ಪ್ರಭಾಕರ್, ಸತೀಶ್, ರಮೇಶ್, ಭಾಸ್ಕರ್, ನಾರಾಯಣ, ಮಂಜುನಾಥ್, ಸೋಮಶೇಖರ್, ಕಾನ್ ಸ್ಟೇಬಲ್ ಗಳಾದ ಇಸ್ಮಾಯಿಲ್, ಜಿಕೆ. ಮಂಜು, ಬೈರಪ್ಪ, ಅಲ್ಲಾವುದ್ದೀನ್, ಗಿರೀಶ್, ಗೋಪಾಲಸ್ವಾಮಿ, ಮಹಿಳಾ ಪೊಲೀಸ್ ಧನಲಕ್ಷ್ಮಿ, ಡಿಪಿಓ ತಾಂತ್ರಿಕ ವಿಭಾಗದ ಹೆಡ್ ಕಾನ್ ಸ್ಟೇಬಲ್ ವಸಂತ, ಮಹಿಳಾ ಪೆÇಲೀಸ್ ಸುನೀತಾ ಹಾಗೂ ಡ್ರೈವರ್ ಗಳಾದ ಮಹದೇವ್, ಪುಟ್ಟಸ್ವಾಮಿ, ಮಹಿಳಾ ಪೆÇಲೀಸ್ ರೇಖಾ ರವರುಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.