ಚಾಲಕನ ಬಳಿ ಹಣ ದರೋಡೆ: 24 ಗಂಟೆಯಲ್ಲಿ ಆರೋಪಿಗಳಿಬ್ಬರ ಬಂಧನ

ಮೈಸೂರು, ಅ. 8- ಲಾರಿ ಚಾಲಕನ ಬೆದರಿಸಿ ನಗದು ಹಾಗು ಮೊಬೈಲ್ ಕಿತ್ತುಕೊಂಡಿದ್ದ ಆರೋಪಿಗಳಿಬ್ಬರನ್ನು 24 ಗಂಟೆಯೊಳಗೆ ಜಿಲ್ಲೆಯ ಕೆ. ಆರ್. ನಗರ ಪೆÇಲೀಸರು ಬಂಧಿಸಿದ್ದಾರೆ.
ಕೆ. ಆರ್. ನಗರದ ಶರತ್ ಮತ್ತು ಬೋಳನಹಳ್ಳಿ ಗ್ರಾಮದ ವಾಸು ಬಂಧಿತ ಆರೋಪಿಗಳು.
ಹತ್ತಿ ತುಂಬಿಕೊಂಡು ಮೈಸೂರಿನಿಂದ ಹಾಸನಕ್ಕೆ ಲಾರಿ ಹೋಗುತ್ತಿದ್ದ ಲಾರಿಯ ಹೆಡ್ ಲೈಟ್ ಶಾರ್ಟ್ ಆದ ಕಾರಣ ಚಾಲಕ ರಂಜಿತ್ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿಕೊಂಡಿದ್ದರು.
ಆಗ ಆರೋಪಿಗಳಿಬ್ಬರು ಲಾರಿ ಚಾಲಕನಿಗೆ ಚಾಕು ತೋರಿಸಿ ಆತನ ಬಳಿ ಇದ್ದ 30 ಸಾವಿರ ರೂ. ನಗದು ಹಾಗೂ 19 ಸಾವಿರ ಬೆಲೆಯ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಕೆ. ಆರ್. ನಗರ ಪೆÇಲೀಸ್ ಠಾಣೆಯಲ್ಲಿ ಚಾಲಕ ಈ ಬಗ್ಗೆ ಪ್ರಕರಣ ದಾಖಲಿಸಿದ್ದ.
ಘಟನೆ ನಡೆದ 24 ಗಂಟೆಯೊಳಗೆ ಪೆÇಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ರಾಜು, ಪಿಎಸ್‍ಐ ಚೇತನ್ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.