ಬಸ್ ಡಿಪೋ ಕಾಂಪೌಂಡ್ ಕುಸಿದು ವ್ಯಕ್ತಿ ಸಾವು

ಮೈಸೂರು: ಮಳೆಗೆ ಬಸ್ ಡಿಪೋ ಕಾಂಪೌಂಡ್ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ನಗರದ ಅರವಿಂದ ನಗರದ 17ನೇ ಕ್ರಾಸ್ ವಾಸಿ ನಂಜುಂಡ ಸ್ವಾಮಿ (55) ಎಂದು ಗುರುತಿಸಲಾಗಿದೆ.
ನಗರದ ಅರವಿಂದ ನಗರದಲ್ಲಿನ ಬಸ್ ಡಿಪೋ ಕಾಂಪೌಂಡ್ ಬಳಿ ನಂಜುಂಡ ಸ್ವಾಮಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಅವರ ಮೇಲೆ ಗೋಡೆ ಕುಸಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಮೈಸೂರಿನ ಹಲವು ಭಾಗದಲ್ಲಿ ಮಧ್ಯಾಹ್ನದಿಂದ ಸುರಿದ ಮಳೆಯಿಂದ ಬಸ್ ಡಿಪೋ ಕಾಂಪೌಂಡ್ ಬಿದ್ದಿದೆ.
ಗೋಡೆ ಕುಸಿತದಿಂದ 4-5 ಕಾರುಗಳು ಸಹ ಸಂಪೂರ್ನವಾಗಿ ಜಖಂಗೊಂಡಿದೆ.