ಮೈಸೂರು, ಅ. 10- ಮೈಸೂರಿನ ಜೋನ್ 2 ವಲಯ ಕಚೇರಿ ಸಮಸ್ಯೆಗಳ ಆಗರ ಕೇಂದ್ರವಾಗಿದೆ.
ಜನಪ್ರತಿನಿಧಿಗಳು, ಆಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೇಂದ್ರವಾಗಿದೆ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ನಗರಪಾಲಿಕೆ ಜೋನ್ 2 ವಲಯ ಕಚೇರಿ.
ಈ ಕಚೇರಿಯಲ್ಲಿ ಪಾರದರ್ಶಕತೆಯಿಲ್ಲ ಎಂಬುದಕ್ಕೆ ದಲ್ಲಾಳಿಗಳು ಕಚೇರಿ ಆವರಣದಲ್ಲೇ ರಾಜಾರೋಷವಾಗಿ ದಂಧೆ ನಡೆಸುತ್ತಿರುವುದು.
ಪಾಲಿಕೆ ಅಧಿಕಾರಿಗಳ ವರ್ಗ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.
ಇದೆಲ್ಲ ಒಂದು ಕಥೆ ಆದರೆ ಜೋನ್ 2 ವಲಯ ಕಚೇರಿಗೆ ದ್ವಾರವೇ ಇಲ್ಲ, ಭದ್ರತಾ ಸಿಬ್ಬಂದಿ ಇಲ್ಲ. ಸಿಸಿ ಕ್ಯಾಮರಾ ಕಣ್ಗಾವಲು ಇಲ್ಲದಂತಹ ಕಚೇರಿ ಇದಾಗಿದೆ.
ಕರ್ನಾಟಕ ಒನ್ ಕಚೇರಿಗೆ ಬರುವ ಹಿರಿಯ ನಾಗರೀಕರು, ಮಹಿಳೆಯರು ಬಿಸಿಲಲ್ಲಿ ಉಣಗಿ, ಮಳೆಯಲ್ಲಿ ನೆನೆಯುವಂತಹಸ್ಥಿತಿ ಈ ಕಚೇರಿಯಲ್ಲಿದೆ.
ಇನ್ನು ಈ ಕಚೇರಿಗೆ ಬರುವವರು ವಾಹನ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿಲ್ಲ.
ಕಚೇರಿಯ ಆವರಣ ಚಪ್ಪಡಿ ಕಲ್ಲು ಡಂಪ್ ಮಾಡುವ ತಾಣವಾಗಿದೆ. ಅಲ್ಲದೆ ಪಾರ್ಥೇನಿಯಂ ಬೆಳದಿದ್ದರು ಸ್ವಚ್ಛ ಮಾಡದ ನಗರಪಾಲಿಕೆ ಕಚೇರಿ ಜೋನ್ 2 ಎಂಬ ಹೆಸರು ಸಹ ಇದಕ್ಕಿದೆ.
ಸ್ವಚ್ಛತೆ ಕಾಪಾಡಿ ಎಂದು ಹೇಳುವ ಮೈಸೂರು ನಗರಪಾಲಿಕೆ ಅಧಿಕಾರಿಗಳು ಜೋನ್ 2 ಕಚೇರಿಯಲ್ಲಿನ ದಲ್ಲಾಳಿ ದಂಧೆಗೆ ಬ್ರೇಕ್ ಹಾಕಿ ಇಲ್ಲಿನ ಅವ್ಯಸ್ಥೆಯನ್ನು ಅದ್ಯಾವಾಗ ಸರಿಪಡಿಸುವರೋ ಕಾದು ನೋಡಬೇಕಿದೆ.