ಮೈಸೂರು: ನಗರದ ಎ.ಟಿ.ಎಂ.ನಲ್ಲಿ ಲಕ್ಷಾಂತರ ರೂ. ಕಳವು ಮಾಡಿದ್ದ ಅಂತರರಾಜ್ಯ ಕಳ್ಳರಿಬ್ಬರನ್ನು ಮೈಸೂರು ಪೊಲೀಸರು ಹರಿಯಾಣದಲ್ಲಿ ಬಂಧಿಸಿದ್ದಾರೆ.
ಆರೋಪಿಗಳಾದ ಹರಿಯಾಣ ರಾಜ್ಯದ ಪಲ್ವಲ್ ಜಿಲ್ಲೆಯ ಹತೀನ್ ತಾಲ್ಲೂಕಿನ ಮೆಹಲುಕ್ ಗ್ರಾಮದ ಅನೀಸ್, (30), ಪಲ್ವಲ್ ಜಿಲ್ಲೆ ಹತೀನ್ ತಾಲ್ಲೂಕು ಗುರಕ್ಸರ್ ಗ್ರಾಮದ ಬರ್ಖತ್ (22) ಬಂಧಿತ ಆರೋಪಿಗಳು.
ವಿಚಾರಣಾ ಕಾಲದಲ್ಲಿ ಆರೋಪಿತರು ಎ.ಟಿ.ಎಂ.ನಲ್ಲಿ ಕಳುವು ಮಾಡಿದ ನಂತರ ಕಳವು ಹಣದ ಪೈಕಿ 1 ಲಕ್ಷ ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದು, ಈ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳ ವಶದಲ್ಲಿದ್ದ 1ಲಕ್ಷ 50 ಸಾವಿರ ರೂ. (ಒಟ್ಟು 2,50,000 ರೂಗಳು) ಮತ್ತು ಕೃತ್ಯಕ್ಕೆ ಬಳಸಿದ ಗ್ಯಾಸ್ ಕಟ್ಟರ್, ಗ್ಯಾಸ್ ಸಿಲೆಂಡರ್, ಗ್ಯಾಸ್ ಪೈಪ್ ಗಳು ಮತ್ತು ಹಾರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ. 17ರಂದು ನಗರದ ವಿಜಯನಗರ ಪೆÇಲೀಸ್ ಠಾಣಾ ಸರಹದ್ದಿನ ರಾಣೆ ಮದ್ರಾಸ್ ಫ್ಯಾಕ್ಟರಿ ಬಳಿ ಇರುವ ಹೆಚ್.ಡಿ.ಎಫ್.ಸಿ. ಬ್ಯಾಂಕಿಗೆ ಸೇರಿದ ಎ.ಟಿ.ಎಂ.ನ ಶೆಟರ್ ಒಡೆದು ಮಿಷನ್ ಅನ್ನು ಗ್ಯಾಸ್ ಕಟ್ಟರ್ ನಿಂದ ಕತ್ತರಿಸಿ 12,81,600 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಟಿಎಂನಲ್ಲಿ ನಗದು ಪ್ರಕರಣ ಪತ್ತೆ ಸಂಬಂಧ ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಅಪರಾಧ ವಿಭಾಗದ ಡಿ.ಸಿ.ಪಿ. ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಆರೋಪಿಗಳ ಪತ್ತೆಗೆ ಬಲೆ ಬೀಸಿ, ತಾಂತ್ರಿಕ ಕೌಶಲ್ಯ ಬಳಸಿ ಆರೋಪಿತರು ಹರಿಯಾಣ ರಾಜ್ಯದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.
ಈ ವಿಶೇಷ ತಂಡವು ಹರ್ಯಾಣ ರಾಜ್ಯಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿನ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಕಳುವು ಮಾಡಲಾದ ಹಣದ ಬಹುಪಾಲು ಹಣ ತಲೆಮರೆಸಿಕೊಂಡಿರುವ ಆರೋಪಿಗಳ ಬಳಿಯೇ ಇರುವ ಬಗ್ಗೆ ತನಿಖೆಯಿಂದ ತಿಳಿದುಬಂದಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ.
ಡಿ.ಸಿ.ಪಿಗಳಾದ ಡಾ. ಪ್ರಕಾಶ ಗೌಡ, ಎ ಎನ್, ಗೀತಪ್ರಸನ್ನ ಹಾಗೂ ಎ.ಸಿ.ಪಿ ಮರಿಯಪ್ಪ ಮತ್ತು ಶಿವಶಂಕರ್ ಅವರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸಪೆಕ್ಟರ್ ಹೆಚ್.ಎನ್. ಬಾಲಕೃಷ್ಣ, ಮೇಟಗಳ್ಳಿ ಪೆÇಲೀಸ್ ಠಾಣೆ ಇನ್ಸಪೆಕ್ಟರ್ ಮಲ್ಲೇಶ್ ಅವರ ನೇತೃತ್ವದಲ್ಲಿ ವಿಜಯನಗರ ಪೆÇಲೀಸ್ ಠಾಣೆಯ ಪಿ.ಎಸ್.ಐ. ರಮೇಶ್, ಇಂದ್ರಮ್ಮ, ದೇವರಾಜ ಪೆÇಲೀಸ್ ಠಾಣೆಯ ಪಿ.ಎಸ್.ಐ. ರಾಜು, ಎ.ಸಿ.ಪಿ. ನರಸಿಂಹರಾಜ ಅವರ ವಿಶೇಷ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಪಿ.ಎಸ್.ಐ ನಾಗರಾಜ್ ನಾಯಕ್, ಕಿರಣ್ ಮತ್ತು ಅನಿಲ್ ಕುಮಾರ್, ಎ.ಎಸ್.ಐ ಅನಿಲ್ ಕೆ ಶಂಕಪಾಲ್ ಸಿಬ್ಬಂದಿಗಳಾದ ಕಾಂತ.ಎಂ. ಲಿಂಗರಾಜಪ್ಪ. ರಮೇಶ, ಸುರೇಶ ಡಿ.ಎಸ್. ಹನುಮಂತ ಕಲ್ಲೇದ, ಗೌರಿಶಂಕರ ಹಾಗೂ ತಾಂತ್ರಿಕ ವಿಭಾಗದ ಇನ್ಸಪೆಕ್ಟರ್ ಲೋಲಾಕ್ಷಿ ಮತ್ತು ಸಿಬ್ಬಂದಿಯವರಾದ ಗುರುದೇವಾರಾಧ್ಯ, ಮಂಜುನಾಥ್, ಶ್ಯಾಮ್ ಮತ್ತು ಕುಮಾರ್, ವಿಜಯನಗರ ಪೆÇಲೀಸ್ ಠಾಣೆಯ ಸಿಬ್ಬಂದಿಯವರಾದ ಮುರಳೀಧರ, ಸ್ವಾಮಾರಾದ್ಯ, ಶ್ರೀನಿವಾಸಮೂರ್ತಿ, ಪ್ರಕಾಶ್, ಅಣ್ಣಪ್ಪ ದೇವಾಡಿಗ, ತಿಲಕ್ಕುಮಾರ್, ಉಮೇಶ್, ಹರೀಶ್, ನಂದೀಶ ಅವರುಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.