ಶಿಕ್ಷಕರಿಗೆ ಮಧ್ಯಂತರ ರಜೆ

ಮೈಸೂರು: ರಾಜ್ಯ ಸರ್ಕಾರ ಇದೀಗ ಶಿಕ್ಷಕರಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದೆ.
ಶಿಕ್ಷಕರಿಗೆ ಅ. 12ರಿಂದ 30ರವರೆಗೆ ಮೂರು ವಾರಗಳ ಮಧ್ಯಂತರ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ಮಧ್ಯಂತರ ರಜೆ ರದ್ದು ಮಾಡಿ ಕೊರೊನಾ ಸಂದರ್ಭದಲ್ಲೂ ಶಾಲೆಗೆ ಹೋಗಿ ಕೆಲಸ ಮಾಡುತ್ತಿದ್ದ ಶಿಕ್ಷಕರಿಗೆ ಸರ್ಕಾರ ಇದೀಗ 3 ವಾರಗಳ ಕಾಲ ರಜೆ ಘೋಷಿಸಿದೆ.
ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಸರಕಾರ ಆದೇಶಿಸಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ದಸರಾ ಶುಭಾಶಯ ತಿಳಿಸಿದ್ದಾರೆ.