ಕೊರೊನಾ: ವಜ್ರಮುಷ್ಠಿ ಕಾಳಗ ರದ್ದು

ಮೈಸೂರು: ಕೊರೊನಾ ಹರಡುವ ಹಿನ್ನೆಲೆಯಲ್ಲಿ ಈ ಬಾರಿ ವಜ್ರಮುಷ್ಠಿ ಕಾಳಗವನ್ನು ರದ್ದುಪಡಿಸಲಾಗಿದೆ.
ದಸರಾ ಸಂದರ್ಭದಲ್ಲಿ ಪ್ರತಿ ವರ್ಷ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ರದ್ದಾಗಿದೆ.
ಜಂಬೂ ಸವಾರಿ ಮೆರವಣಿಗೆಯ ದಿನ ಅರಮನೆಯ ಒಳ ಆವರಣದ ಸವಾರಿ ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗವನ್ನು ರದ್ದು ಮಾಡಲಾಗಿದೆ.
ಜಟ್ಟಿ ಜನಾಂಗದವರಿಂದ ಪ್ರತಿವರ್ಷ ದಸರಾ ಜಂಬೂ ಸವಾರಿ ದಿನ ವಜ್ರಮುಷ್ಠಿ ಕಾಳಗ ನಡೆಯುತ್ತಿತ್ತು.
ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ರಾಜಮನೆತನದವರು ಈ ಬಾರಿ ವಜ್ರಮುಷ್ಠಿ ಕಾಳಗ ಬೇಡ ಎಂದು ಸೂಚಿಸಿದ್ದಾರೆ.
ವಜ್ರಮುಷ್ಠಿ ಕಾಳಗಕ್ಕೆ ಜಟ್ಟಿಗಳು ಕಳೆದ 6 ತಿಂಗಳಿಂದ ಸಿದ್ಧತೆ ನಡೆಸಿದ್ದರು. ಆದರೆ ಈ ಕೊರೊನಾದಿಂದಾಗಿ ಈ ವಜ್ರಮುಷ್ಠಿ ಕಾಳಗ ರದ್ದಾಗಿದೆ.
ವಜ್ರಮುಷ್ಠಿ ಕಾಳಗ ರದ್ದಾಗಿರುವ ಕುರಿತು ಪ್ರತಿಕ್ರಿಯಿಸಿದ ಜಟ್ಟಿಕಾಳಗ ಉಸ್ತಾದ್ ಟೈಗರ್ ಬಾಲಾಜಿ, ರಾಜಮಾತೆಯವರ ಈ ನಿರ್ಧಾರ ಒಳ್ಳೆಯದಾಗಿದೆ. ಆದರೆ ನಮಗೆ ಬೇಸರವೂ ಆಗಿದೆ. ಕಾರಣ ಇತಿಹಾಸದಲ್ಲಿ ಇದೇ ಮೊದಲು ವಜ್ರಮುಷ್ಠಿ ಕಾಳಗ ನಡೆಯುತ್ತಿಲ್ಲ. ನಾವು ದಸರೆಗಾಗಿ ಸಾಕಷ್ಟು ಕಸರತ್ತು ಮಾಡಿ ತಯಾರಾಗಿದ್ದೆವು. ಆದರೆ ಕೊರೊನಾದಿಂದ ವಜ್ರಮುಷ್ಠಿ ಕಾಳಗ ರದ್ದಾಗಿದೆ. ರಾಜಮನೆತನದವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದಾರೆ.