ಶಿಕ್ಷಕಿ ಚಿಕಿತ್ಸೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಂದನೆ

ಬೆಂಗಳೂರು: ತನ್ನ ತಾಯಿಯ ಚಿಕಿತ್ಸೆಗೆ ಪರಿತಪಿಸುತ್ತಿದ್ದ ವಿಷಯ ತಿಳಿದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣ ಸ್ಪಂದಿಸಿ ಉತ್ತಮ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆ.
ಈ ಕುರಿತು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಐಶ್ವರ್ಯ ಜೈನ್ ತನ್ನ ಕೋವಿಡ್ ಸೋಂಕಿತ ತಾಯಿಯ ವೈದ್ಯಕೀಯ ಶುಶ್ರೂಶೆಗೆ ಪರಿತಪಿಸುತ್ತಿದ್ದ ಅಂಶ, ಆಕೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ ಅಂಶ ಗುರುವಾರ ಬೆಳಗ್ಗೆ ನನ್ನ ಗಮನಕ್ಕೆ ಬಂದಿತು.
ಕೂಡಲೇ ಈ ಬಗ್ಗೆ ಜಿಲ್ಲಾಡಳಿತವನ್ನು ಕ್ರಮ ವಹಿಸಲು ಸೂಚಿಸಲಾಯಿತು.
ಐಶ್ವರ್ಯ ಜೈನ್ ಅವರ ತಾಯಿಯ ಸಂಪೂರ್ಣ ಚಿಕಿತ್ಸೆಯ ಖರ್ಚು ವೆಚ್ಚವನ್ನು ಸರ್ಕಾರ ಭರಿಸಲು ನಿರ್ಣಯಿಸಿದೆ.
ಅತ್ಯುತ್ತಮ ಚಿಕಿತ್ಸೆಯನ್ನು ಆಸ್ಪತ್ರೆ ಅವರಿಗೆ ಒದಗಿಸಲಿದೆ ಎಂದು ಸುರೇಶ್ ಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ.